ರಾಜ್ಯ ಪೊಲೀಸರಿಗೆ 20 ಲಕ್ಷ ರುಪಾಯಿಗಳ ಗುಂಪು ವಿಮೆಯನ್ನು ನೀಡಲು ನಮ್ಮ ಜಯಕರ್ನಾಟಕ ಸಂಘಟನೆಯು ಸರ್ಕಾರಕ್ಕೆ ಮಾಡಿದ್ದ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಿರುವ ಬಗ್ಗೆ ಸಂಘಟನೆಯ ದಿನಾಂಕ 6/9/2021 ರಂದು ಕರ್ನಾಟಕ ಸರ್ಕಾರಕ್ಕೆ ಪೊಲೀಸ್ ಇಲಾಖೆಯಲ್ಲಿನ ಡಿವೈಎಸ್ಪಿ ಹುದ್ದೆಯ ಮೇಲ್ಪಟ್ಟವರಿಗೆ ಮಾತ್ರವಲ್ಲದೆ ಹಗಲಿರುಳೆನ್ನದೆ ನಾಡ ರಕ್ಷಣೆಗಾಗಿ ದುಡಿಯುತ್ತಿರುವ ಕೆಳಗಿನ ಹುದ್ದೆಯ ಅಧಿಕಾರಿಗಳಿಗೆ ಸುಮಾರು 20 ಲಕ್ಷ ರೂಪಾಯಿಗಳ ಗುಂಪು ವಿಮಾ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಮನವಿಯನ್ನು ಮಾಡಿದ್ದೆವು.

ಅದಕ್ಕೆ ಪ್ರತಿಫಲವಾಗಿ ಸರ್ಕಾರವು ದಿನಾಂಕ10/10/2021 ರಿಂದಲೇ ಯೋಜನೆಯನ್ನು ಜಾರಿಗೊಳಿಸಿದ್ದೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪತ್ರದ ಮುಖೇನ ನಮಗೆ ಮಾಹಿತಿಯನ್ನು ನೀಡಿದ್ದು
ಆದ ಕಾರಣದಿಂದಾಗಿ ನಾಡಿನ ಎಲ್ಲಾ ಆರಕ್ಷಕರ ಸಿಬ್ಬಂದಿಯ ಪರವಾಗಿ ಹಾಗೂ ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕದ ಪರವಾಗಿ
ಕರ್ನಾಟಕ ರಾಜ್ಯ ಸರ್ಕಾರಕ್ಕೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.

ವಂದನೆಗಳೊಂದಿಗೆ
ಶ್ರೀಮತಿ ನಾಜಿಮಾ ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಮಹಿಳಾ ಅಧ್ಯಕ್ಷರು ಮತ್ತು ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಪ್ರೇಮ ಎನ್ ಶೆಟ್ಟಿ…