ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದಿಂದ 2021-22 ನೇ ಸಾಲಿನ ಅಂತರ ಕಾಲೇಜು ಸೆಪಕ್‌ಟಕ್ರಾ (ಕಿಕ್ ವಾಲಿಬಾಲ್) ಪಂದ್ಯಾವಳಿಯಲ್ಲಿ ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಪುರುಷ ಮತ್ತು ಮಹಿಳಾ ತಂಡದ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.

ಪುರುಷ ತಂಡದಲ್ಲಿ ಎಂ.ಎಸ್.ಸುಪ್ರಿತ್, ಅಭಿಷೇಕ್ ಭಾರದ್ವಾಜ್, ಅಭಿಷೇಕ್ .ಕೆ.ಎಸ್, ಸುಜಿತ್ ಜೈಸನ್ ಮತ್ತು ಮಹಿಳಾ ತಂಡದಲ್ಲಿ ನಿಕಿತಾ.ಬಿ.ಜಿ, ಅಮೃತಾ.ಎಸ್.ಎಂ, ಸುರೇಸ್ಕ.ವಿ.ಎ, ನಿಸರ್ಗ.ಕೆ.ಎನ್, ಕವನ ಕಡದಕಟ್ಟೆ, ದೇವಿಕಾ.ಜಿ.ಎಸ್ ಬಹುಮಾನ ಪಡೆದಿದ್ದಾರೆ.

ಇವರಿಗೆ ಕಾಲೇಜಿನ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ .

ವರದಿ ಮಂಜುನಾಥ್ ಶೆಟ್ಟಿ…