ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯು ದಿನಾಂಕಃ-15-01-2022 ರಂದು ಮಧ್ಯಾಹ್ನ ತನ್ನ ಗ್ರಾಮಕ್ಕೆ ಹೋಗಲು ಹೊಸನಗರ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ, ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬರುತ್ತಿದ್ದ ಸಮಯದಲ್ಲಿ ಪರಿಚಯವಾಗಿದ್ದ ಸಂತೋಷ ಮತ್ತು ಸುನಿಲ್ ಇಬ್ಬರು ಬಾಲಕಿಯನ್ನು ಕರೆದು ನಾವು ಕೂಡ ನಿಮ್ಮ ಗ್ರಾಮದ ಕಡೆಗೆ ಹೋಗುತ್ತೇವೆ ನಮ್ಮ ಜೊತೆ ಕಾರಿನಲ್ಲಿ ಬಾ ಎಂದು ಆಕೆಯನ್ನು ಪುಸಲಾಯಿಸಿ ಕಾರಿನಲ್ಲಿ ಸುನಿಲನ ರೂಂ ಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿಕೊಂಡು.
ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುತ್ತಾರೆ ಹಾಗೂ ಪುನಾಃ ಕರೆದಾಗ ಬಾಲಕಿಯು ನಿರಾಕರಿಸಿದ್ದರಿಂದ ವಿಡಿಯೋವನ್ನು ರಾಘವೇಂದ್ರ, ಸಚಿನ್ ಮತ್ತು ಸುಬ್ಬು ಎಂಬುವವರ ಮೊಬೈಲ್ ಗಳಿಗೆ ಕಳುಹಿಸಿರುತ್ತಾರೆಂದು ದಿನಾಂಕಃ- 21-01-2022 ರಂದು ನೊಂದ ಬಾಲಕಿಯು ನೀಡಿದ ಹೇಳಿಕೆ ದೂರಿನ ಮೇರೆಗೆ ಕಲಂ 363, 376(2)(f), 506 R/w 34 IPC ಮತ್ತು ಕಲಂ 04 POCSO ಹಾಗೂ 66(e), 67(b) IT ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ಪಿಎಸ್ಐ ಹೊಸನಗರ ಮತ್ತು ಸಿಬ್ಬಂಧಿಗಳ ತಂಡವು ತನಿಖೆ ಕೈಗೊಂಡು ಆರೋಪಿತರಾದ ಸಂತೋಷ, 24 ವರ್ಷ ಮತ್ತು ಸುನಿಲ್, 26 ವರ್ಷ, ಹೊಸನಗರ ತಾಲ್ಲೂಕು ರವರುಗಳನ್ನು ದಸ್ತಗಿರಿ ಮಾಡಿರುತ್ತಾರೆ.