ಸುಭಾಷ್ ಚಂದ್ರಬೋಸ್ ರವರ 125ನೇ ಜಯಂತಿ ಅಂಗವಾಗಿ ಭಾರತೀಯ ಸೇನೆಯಲ್ಲಿ 25 ವರ್ಷಗಳಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮೇಜರ್ ನಾಗೇಶರವರ ತಾಯಿಯಾದ ಶ್ರೀಮತಿ ಗೌರಮ್ಮರವರನ್ನು ಹಾಗೂ ಗಾಂಧಿ ಬಸಪ್ಪ ಅವರ ಮಗಳಿಗೆ ಪ್ರೀತಿ ಪೂರ್ವಕವಾಗಿ ಜೆಸಿಐ ಶಿವಮೊಗ್ಗ ಶರಾವತಿ ಘಟಕ ದಿಂದ ರಾಯಲ್ ಡೈಮಂಡ್ ಸ್ಕೂಲ್ ನಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಸದಸ್ಯರದ ನವೀನ್ ತಲಾರಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು. ಜೆಸಿಐ ಸದಸ್ಯರಾದ ಅಶ್ವಿನಿ ಅವರು ಗಾಂಧಿ ಬಸಪ್ಪನವರ ಬಗ್ಗೆ ಪರಿಚಯ ಮಾಡಿಕೊಟ್ಟರು. ಅಧ್ಯಕ್ಷರನ್ನು ಸೌಮ್ಯ ಅರಳಪ್ಪ ಅವರು ಸನ್ಮಾನಿತರು ಹಾಗೂ ಗಾಂಧಿ ಬಸಪ್ಪ, ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು.
ರಾಘವೇಂದ್ರ ಜೆಸಿಐ ಸದಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಯಸಿದ್ದರು. ಜೆಸಿಐ ಕಾರ್ಯದರ್ಶಿ ಮಮತಾ ಅವರು ವಂದನಾರ್ಪಣೆ ನೆರವೇರಿಸಿದರು. ಗಾರಾ ಶ್ರೀನಿವಾಸ್ ಸೂರ್ಯಗಗನ ಪತ್ರಿಕೆ ಸಂಪಾದಕರು ಜೆಸಿಐ ಮಾಜಿ ಅಧ್ಯಕ್ಷರು ಹಾಗೂ ಜೆಸಿಐ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ , ಅಧ್ಯಕ್ಷರು ಮತ್ತು ಕಾರ್ಯದರ್ಶಿ ಜೆಸಿಐ ಶಿವಮೊಗ್ಗ ಶರಾವತಿಯಿಂದ ಧನ್ಯ ವಾದಗಳು.