ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಮಾತನಾಡಿ ಶಿವಮೊಗ್ಗ ಜಿಲ್ಲೆಯ ಸ್ಥಿತಿಗತಿಗಳನ್ನು ವಿವರಿಸಿದರು .
ಪ್ರಾರಂಭದ ದಿನಗಳಲ್ಲಿ ಕೋವಿಡ ಲಸಿಕೆ ಹಾಕಲು ನಾವು ಎಲ್ಲರಿಗೂ ಬನ್ನಿ ಎಂದು ಕರೆಯುವ ಪರಿಸ್ಥಿತಿ ಇತ್ತು ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಲ್ಲರೂ ಸ್ವೇಚ್ಛೆಯಿಂದ ಲಸಿಕೆಗಾಗಿ ಬರುತ್ತಿದ್ದಾರೆ ಹಾಗಾಗಿ ಲಸಿಕೆ ಅಭಾವ ಕಾಣಿಸುತ್ತಿದೆ . ಇನ್ನೂ 2ರಿಂದ 3ದಿನಗಳಲ್ಲಿ ಲಸಿಕೆ ಬಂದು ತಲುಪಲಿದೆ. ಕೋವಿಡ ತಪಾಸಣೆಯ ಫಲಿತಾಂಶ ವಿಳಂಬದ ಹಿನ್ನೆಲೆಯಲ್ಲಿ ಮಾತನಾಡಿ ಈಗ ಎಲ್ಲ ಸರಿಯಾಗಿದೆ ಈ ದಿನ ಟೆಸ್ಟ್ ಗಳಿಗೆ ಬಹುತೇಕ ಈ ದಿನವೇ ರಿಪೋರ್ಟ್ ಕೊಡಲಾಗುತ್ತಿದ್ದು ತಪ್ಪಿದಲ್ಲಿ ಮರುದಿನ ನೀಡಲಾಗುತ್ತಿದೆ . ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸರಬರಾಜಿಗೆ ಏಜೆನ್ಸಿಯನ್ನು ನೇಮಕ ಮಾಡಲಾಗಿದೆ. ಅಲ್ಲದೆ ಸ್ಟಾಫ್ ಗಳಿಗೂ ಕೂಡ ತರಬೇತಿ ನೀಡಲಾಗಿದೆ ಎಂದು ಹೇಳಿದರು .
ಇಂದಿರಾ ಕ್ಯಾಂಟಿನ್ ನಲ್ಲಿ ನೀರಿನ ಸಮಸ್ಯೆ ಬಗ್ಗೆ ಕೇಳಿದಾಗ ಉಸ್ತುವಾರಿ ಸಚಿವರು ಈ ತಕ್ಷಣ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಉಸ್ತುವಾರಿ ಸಚಿವರು ಸೊರಬದಲ್ಲಿ ಭಾನುವಾರ ಕೋವಿಡ ಆಸ್ಪತ್ರೆ ಪ್ರಾರಂಭಿಸುವುದಾಗಿ ತಿಳಿಸಿದರು .
ಶಿವಮೊಗ್ಗ ಜಿಲ್ಲೆಯ ಕೋವಿಡ ಮಾಹಿತಿ
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ