ಅಬ್ಬಲಗೆರೆ ಸರ್ಕಾರಿ ಪ್ರೌಡ ಶಾಲೆಗೆ ರೋಟರಿ ಶಿವಮೊಗ್ಗ ಉತ್ತರದಿಂದ ಇಲ್ಲಿನ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಇಂದು ಬೆಳಿಗ್ಗೆ ಸುಸಜ್ಜಿತ ಶೌಚಾಲಯ ಮತ್ತು ನ್ಯಾಪಕ್ಕಿನ್ ಬರ್ನರ್ ಸೌಲಭ್ಯ ವನ್ನು ಸುಮಾರು 300000/ ರೂ. ವೆಚ್ಚದಲ್ಲಿ ನಿರ್ಮಿಸುವ ಸಲುವಾಗಿ ಶಾಲೆಗೆ ಬೇಟೆ ಮಾಡಿ ಕಾಮಗಾರಿಯನ್ನು ವೀಕ್ಷಿಸಲಾಯಿತು.

ಅಮೇರಿಕದ ಮೊಡೆಸ್ಟೋ ಕ್ಲಬ್ ವತಿಯಿಂದ ರೋಟರಿ ಉತ್ತರದ ಸಹಯೋಗದೊಂದಿಗೆ ಸುಮಾರು 21 ಶಾಲೆಗೆ ಸುಮಾರು 27 ಲಕ್ಷ ವೆಚ್ಚದಲ್ಲಿ ಶೌಚಾಲಯ , ನ್ಯಪಕ್ಕಿನ್ ಬರ್ನರ ,ಕುಡಿಯವ ನೀರು, ಹ್ಯಾಂಡ ವಾಸ್ ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಅನುದಾನದ ಮುಖಾಂತರ ಅನುಷ್ಠಾನಗೊಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಗೌರ್ವನರ್ ಶ್ರೀ ಎ.ಎಸ್.ಚಂದ್ರಶೇಖರ, ಜಿ.ವಿಜಯಕುಮಾರ್, ರವೀಂದ್ರನಾಥ ಐತಾಳ,ನಾಗರಾಜ ಎಚ್.ಡಿ,ಶಿವಣ್ಣ ಮತ್ತು ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ಬಿ.ಎಚ್‌.ನಿರಂಜನ್ ಮೂರ್ತಿ, ಆಸಿಯಾಬಾನು ಮತ್ತು ಶ್ರೀ ವಿಶ್ವನಾಥರವರು ಉಪಸ್ಥಿತಿರಿದ್ದರು.

ವರದಿ ಮಂಜುನಾಥ್ ಶೆಟ್ಟಿ…