“ಕನ್ನಡ ಅನ್ನದ ಭಾಷೆ, ಬದುಕು ಕಲಿಸುವ ಭಾಷೆ, ಶಕ್ತಿಯುತವಾದ ಭಾಷೆಯಾಗಿಸುವ ಮೂಲಕ ನೀವು ನೀಡಿದ ಅಮೂಲ್ಯ ಮತಗಳಿಗೆ ಕೃತಜ್ಞತೆ ಸಲ್ಲಿಸುವೆ”…
ಡಾ: ನಾಡೋಜ ಮಹೇಶ್ ಜೋಶಿ ಹೇಳಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಅಭೂತಪೂರ್ವ ಮತವನ್ನು ಗಳಿಸಿ ಜಯಭೇರಿ ಭಾರಿಸಿ, ಇದೀಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ, ಕನ್ನಡ ನಾಡು, ನುಡಿ, ನೆಲ, ಜಲದ ಸಂರಕ್ಷಣೆಗೆ ನೂರಾರು ಕಾರ್ಯಕ್ರಮಗಳನ್ನು ಹೆಣೆಯುವ ಮಹತ್ತರ ಆಶಯ ಹೊತ್ತ ನಾಡೋಜ ಡಾ: ಮಹೇಶ್ ಜೋಷಿಯವರು ಹಾಗೂ ಅವರ ಪತ್ನಿ ಶ್ರೀಮತಿ ಮಾಲತಿ ರವರು ಶಿವಮೊಗ್ಗ ಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಸಂದರ್ಭದಲ್ಲಿ ಶಿವಮೊಗ್ಗದ ಸನ್ಮಿತ್ರರ ಕೂಟದಿಂದ ಆತ್ಮೀಯವಾಗಿ ದಂಪತಿಗಳನ್ನು ಅಭಿನಂದಿಸಲಾಯಿತು.
ನಾಡೋಜ ಮಹೇಶ್ ಜೋಷಿಯವರು ನೀವೆಲ್ಲರು ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ನನಗೆ ಗೆಲವು ಗಳಿಸಿಕೊಟ್ಟು ಕನ್ನಡದ ಕೆಲಸಗಳ ಸಾರಥ್ಯ ನಿರ್ವಹಿಸಲು ಅನುಮತಿ ನೀಡಿದ್ದೀರಾ ನಿಮ್ಮೆಲ್ಲರ ಆಶಯದಂತೆ ಕಾರ್ಯ ನಿರ್ವಹಿಸಿ, ಸ್ಮರಣೆಯಲ್ಲಿ ಉಳಿಯುವ ಕಾರ್ಯಗಳಿಂದ ಪರಿಷತ್ತಿನ ಹಿರಿಮೆ ಹೆಚ್ಚಿಸಲು ದುಡಿಯುವೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮತ ನೀಡಿದ ಪ್ರತಿಯೊಬ್ಬ ಮತದಾರರಿಗೂ, ಚುನಾವಣಾ ನಿರ್ವಹಣಾ ತಂಡಕ್ಕೂ ನನ್ನ ಹೃದಯಪೂರ್ವ ಕೃತಜ್ಞತೆ ಗಳು ಎಂದು ಹೇಳಿದರು.
ಕನ್ನಡದ ಬಗ್ಗೆ ಗೌರವ ಇರುವ ಸದಸ್ಯತ್ವ ಸಂಖ್ಯೆ ಪರಿಷತ್ತಿನಲ್ಲಿ ಹೆಚ್ಚಬೇಕು. ಕ.ಸ.ಪ.ಸದಸ್ಯತ್ವ ಸಂಖ್ಯೆ ಒಂದು ಕೋಟಿಯಾಗಿಸುವುದು, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ ರಕ್ಷಣೆಯ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಸಮೀಪ ಪರಿಷತ್ತನ್ನಾಗಿಸುವುದು ನನ್ನ ಉದ್ದೇಶ. ನಿಮ್ಮೆಲ್ಲರ ಸಹಕಾರದಿಂದ ಕನ್ನಡ ಶಕ್ತಿಯುತವಾದ, ಹೊಟ್ಟೆ ತುಂಬಿಸುವ, ಗೆಲ್ಲುವ ಭಾಷೆ ಆಗಿಸುವುದು ನನ್ನ ಮುಖ್ಯ ಉದ್ದೇಶ. ಕನ್ನಡ ಪ್ರಸಾರ ಅಭಿವೃದ್ಧಿಯೇ ನಮ್ಮೆಲ್ಲರ ಉದ್ದೇಶವಾಗಿಸೋಣ ಎಂದು ನಾಡೋಜ ಡಾ: ಮಹೇಶ್ ಜೋಷಿಯವರು ನುಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಶ್ರೀ ಸುಂದರ್ ರಾಜ್ ರವರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗೋಪಿನಾಥ್ ಎನ್ ರವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಶಿವಮೊಗ್ಗ ಜಿಲ್ಲಾ ಕ.ಸ.ಪದ ಮಾಜಿ ಅಧ್ಯಕ್ಷರಾದ ಶ್ರೀ ಡಿ.ಬಿ.ಶಂಕರಪ್ಪನವರು ಚುನಾವಣೆ ನಿಮಿತ್ತ ಓಡಾಡಿದ ಎಲ್ಲರಿಗೂ ನಮಸ್ಕಾರ ತಿಳಿಸಿ, ಶ್ರೀ ಮಹೇಶ್ ಜೋಷಿಯವರ ಅವಧಿಯ ಎಲ್ಲ ಕಾರ್ಯಗಳು ಜನಮಾನಸದ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ನಿರ್ವಹಣೆ ಯನ್ನು ಶ್ರೀರಂಜಿನಿ ದತ್ತಾತ್ರಿಯವರು ನೆರವೇರಿಸಿದರು.ವೇದಿಕೆಯಲ್ಲಿ ಸನ್ಮಿತ್ರರ ತಂಡದ ಶ್ರೀ ಡಿ.ಬಿ ಶಂಕರಪ್ಪ, ಸುಂದರ್ ರಾಜ್, ಮಾ.ಸ. ನಂಜುಂಡಸ್ವಾಮಿ, ಸುರೇಖಾ ಮುರಳೀಧರ್ ಉಪಸ್ಥಿತರಿದ್ದರು.
ಗೌರವ ಸಮರ್ಪಣೆಯಲ್ಲಿ ಶ್ರೀರಂಜಿನಿ ದತ್ತಾತ್ರಿ, ಸುಂದರ್ ರಾಜ್, ಗೋಪಿನಾಥ್, ಜಿ. ವಿಜಯಕುಮಾರ್, ಚನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಗನೋಡು, ಸಾಗರದ ಹಿತಕರ್ ಜೈನ್, ಎನ್.ಡಿ. ಸತೀಶ್, ಜಯಪ್ಪ, ಅಣ್ಣಪ್ಪ, ಕುಬೇರಪ್ಪ, ನಾಗರಾಜ್..ಸೇರಿದಂತೆ ಚುನಾವಣಾ ನಿರ್ವಹಣಾ ತಂಡದ ಹಲವರು ಉಪಸ್ಥಿತರಿದ್ದರು.