ಶಿವಮೊಗ್ಗ: ನಿರಂತರ ಕುಡಿಯುವ ನೀರಿನ ಸರಬರಾಜು ಯೋಜನೆಯ ನೀರಿನ ತೆರಿಗೆ ಕುರಿತಂತೆ ವಿಶೇಷ ಸಭೆ ಕರೆಯಬೇಕೆಂದು ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಒತ್ತಾಯಿಸಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24*7 ನಿರಂತರ ನೀರು ಕುಡಿಯುವ ಸರಬರಾಜು ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಕಾರ್ಯಾದೇಶದ ಪ್ರಕಾರ, ನಿಗದಿತ ಅವಧಿ ಮುಗಿದಿದ್ದರೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ. ಬಹುತೇಕ ವಾರ್ಡ್ ಗಳಲ್ಲಿ ಯೋಜನೆಯ ಗೃಹ ಸಂಪರ್ಕ ನೀಡಿಲ್ಲ. ರವೀಂದ್ರ ನಗರ ಬಡಾವಣೆಯ ಹಾಗೂ ಇನ್ನಿತರ ಬಡಾವಣೆ ನಾಗರಿಕರಿಗೆ ಈ ಯೋಜನೆಯಡಿಯಲ್ಲಿ ನಗರ ನೀರು ಸರಬರಾಜು ಮಂಡಳಿ ವತಿಯಿಂದ ನೀಡಲಾಗಿರುವ ನೀರಿನ ತೆರಿಗೆ ಬಿಲ್ ನಲ್ಲಿ ನಮೂದಿಸಿರುವ ತೆರಿಗೆ ದರದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಎಂದು ದೂರಿದ್ದಾರೆ.

ಈ ಹಿನ್ನಲೆಯಲ್ಲಿ ಕಾರಣ ಕೂಡಲೇ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು, ಪಾಲಿಕೆ ಸದಸ್ಯರು, ಹಾಗೂ ಬಡಾವಣೆಗಳ ನಾಗರಿಕ ಸಮಿತಿಗಳ ಸಭೆಯನ್ನು ಕೂಡಲೇ ಆಯೋಜಿಸಿ ತೆರಿಗೆದಾರರ ಸ್ನೇಹಿ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಮಹಾಪೌರರನ್ನು ಒತ್ತಾಯಿಸಿದ್ದಾರೆ.  

ವರದಿ ಮಂಜುನಾಥ್ ಶೆಟ್ಟಿ…