ಶಿವಮೊಗ್ಗ: ದುಬಾರಿ ನೀರಿನ ಬಿಲ್ ವಿರುದ್ಧ ರವೀಂದ್ರ ನಗರ ನಿವಾಸಿಗಳು ಸಿಡಿದೆದ್ದಿದ್ದಾರೆ. ಅವೈಜ್ಞಾನಿಕ ನೀರಿನ ಕಂದಾಯ ಕಟ್ಟದಂತೆ ರವೀಂದ್ರ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಭೆ ನಡೆಸಿದ ನಿವಾಸಿಗಳು ನೀರಿನ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಾಗರೀಕರ ಹೋರಾಟ ಸಮಿತಿಯ ಅಧ್ಯಕ್ಷ ವಸಂತಕುಮಾರ್, ವಿನೋಬನಗರದಲ್ಲಿ ತಿಂಗಳಲ್ಲಿ 4 ಸಾವಿರ ಬಿಲ್ ಬಂದಿದೆ. ರವೀಂದ್ರ ನಗರದಲ್ಲಿ ತಿಂಗಳಿಗೆ 8 ಸಾವಿರ ರೂ ಬಿಲ್ ಬಂದಿದೆ. ಗುಣಮಟ್ಟದ ನೀರನ್ನ ಕೊಡ್ತಾ ಇದ್ದಾರ? ಲ್ಯಾಬಿಲ್ಲ. ಅಮೆರಿಕದಲ್ಲಿ ನಳದಲ್ಲಿ ಬಿಸಿನೀರು ಕೊಡಲಾಗುತ್ತಿದೆ. ನೇರವಾಗಿ ನೀರು ಬಳಸಬಹುದು. ಆದರೆ ಇಲ್ಲಿ ಬಳಸಿದರೆ ನೇರವಾಗಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಲೇವಡಿ ಮಾಡಿದರು.ಇಲಾಖೆಯು ನೀರಿನ ಬಳಕೆಯ ಖರ್ಚಾಗುವ ಬಗ್ಗೆ ಮಾಹಿತಿ ಅಥವಾ ಅಂಕಿ ಅಂಶ ನೀಡಬೇಕು. ಮೀಟರ್ ಫಿಕ್ಸ್ ಆಗಿರುವುದು ಸೇಫ್ಟಿ ಇಲ್ಲ. ಡ್ರೈನೇಜ್ ಮೇಲೆ ಪೈಪ್ ಲೈನ್ ನೀಡಲಾಗಿದೆ. 2023 ರಿಂದ ಆಸ್ತಿ ತೆರಿಗೆ ಎಫೆಕ್ಟ್ ಹಾಕಲಾಗುತ್ತದೆ.

ಹೈಕೋರ್ಟ್ ನಲ್ಲಿ ಈ ತೆರಿಗೆ ವಿರುದ್ಧ ದಾವೆ ಹೂಡಲಾಗುತ್ತಿದೆ ಎಂದರು.ನಗರಾದ್ಯಂತ ಇದರ ವಿರುದ್ಧ ವಾಟರ್ ಬಿಲ್ ವಿರುದ್ಧ ಕೂಗಲಾಗುತ್ತಿದೆ. ಎಷ್ಟು ತೆರಿಗೆ ವಿಧಿಸುತ್ತೀರ ಎಂಬುದನ್ನ ಪಾಲಿಕೆ ಅಥವಾ ಜಲಮಂಡಳಿ ಬರವಣಿಗೆಯಲ್ಲಿ ನೀಡಿದಲ್ಲಿ ಶುಲ್ಕ ಕಟ್ಟಲಾಗುತ್ತದೆ. ಜಿಎಸ್ಟಿ ಸೇರಿದಂತೆ ಹಲವು ಬಿಲ್ ನ್ನ ಪಾಲಿಕೆ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಟ್ಟುತ್ತೇವೆ.ಪುಕ್ಕಟೆ ಬೇಡ ಆದರೆ ನೋ ಪ್ರಾಫಿಟ್ ಹಾಗೂ ನೋ ಲಾಸ್ ನಲ್ಲಿ ಬಿಲ್ ನೀಡಬೇಕು. ನೀರು ಸರಬರಾಜುವಿನಿಂದ ಒಬ್ಬ ಮನುಷ್ಯನಿಗೆ ತಲುಪಲು ಪಾಲಿಕೆಗೆ ತಗಲುವ ಮೊತ್ತ ವೆಷ್ಟು ಅದನ್ನ ಲೆಕ್ಕ ನೀಡಬೇಕು. ಗುಣಮಟ್ಟದ ನೀರು ನೀಡಿ. ಶುಲ್ಕ ಎಷ್ಟು ತಿಳಿಸಿ ಒಂದು ವರ್ಷ 24×7 ನೀರು ಕೊಡಿ ಆಮೇಲೆ ಬಿಲ್ ಕಟ್ಟುತ್ತೇವೆ ಎಂಬ ಬೇಡಿಕೆಯನ್ನ ಸಭೆಗೆ ತಿಳಿಸಿದರು.ಶಾಸಕರನ್ನ ಭೇಟಿ ಮಾಡೋಣ, ಕಾನೂನು ಹೋರಾಟದ ನಂತರವೇ ಬಿಲ್ ಕಟ್ಟೋದು ಎಂದು ವಸಂತ್ ಕುಮಾರ್ ತಿಳಿಸಿದರು.

ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ ಮಾತನಾಡಿ, ವಿವೇಕಾನಂದ ಬಡಾವಣೆಯಲ್ಲಿ ಮೊದಲು ನೀರು ಬರುವುದಕ್ಕಿಂತ ಮುಂಚೆ ಗಾಳಿ ಬರೋದಕ್ಕೆ ಮೀಟರ್ ತಿರುಗುತ್ತಿತ್ತು. ಹಾಗಾಗಿ ಅವೈಜ್ಞಾನಿಕ ನೀರಿನ ಬಿಲ್ ಬರುತ್ತಿದೆ.ಈ ಬಗ್ಗೆ ವಸಂತ್ ಕುಮಾರ್ ಹೇಳಿದಂತೆ ನಡೆದುಕೊಳ್ಳೋಣವೆಂದರು.ನೀರು ಬಿಡುವ ವೇಳೆಯಲ್ಲೂ ಚರ್ಚೆ ಆಯಿತು. ಮಧ್ಯರಾತ್ರಿ 1-30 ರಿಂದ 3 ಗಂಟೆಯ ವರೆಗೆ ನೀರು ಬರುತ್ತದೆ ಈ ವೇಳೆ ಯಾರು ನೀರು ಹಿಡಿಯಬೇಕು. ಬೆಳಿಗ್ಗೆ 6-45 ರಿಂದ 7-20ರವರೆಗೆ ನೀರು ಬರುತ್ತದೆ. ಸರಿಯಾಗಿ ನೀರು ವಾರ್ಡ್ ಗೆ ಬರುತ್ತಿಲ್ಲವೆಂಬುದು ನಾಗರೀಕರು ಚರ್ಚಿಸಿದರು.
ರವೀಂದ್ರ ನಗರದ ನಿವಾಸಿಗಳ ಸಂಘದ ಅಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಆರತಿ ಆ.ಮಾ.ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…