ಶಿವಮೊಗ್ಗ ನಗರದ ಪಿ ಇ ಎಸ್ ಪದವಿಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಹಾಗೂ ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಶೈಲಿ ಹಾಗೂ ಫಿಟ್ ಇಂಡಿಯಾ ಕಾರ್ಯಾಗಾರವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ ಎಸ್ ಅರುಣ್ ರವರು ಉದ್ಘಾಟಿಸಿದರು.
ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಿವೈಎಸ್ ಪಿ ಪ್ರಶಾಂತ್ ಜಿ ಮುನ್ನೋಳಿ ಮತ್ತು ಮನೋವೈದ್ಯ ಡಾ. ಸುಬ್ರತಾ ರವರು ಕಾರ್ಯಗಾರಕ್ಕೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಉಲ್ಲಾಸ್ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ,ಶ್ರೀ ಎಸ್ ರಂಗನಾಥಯ್ಯ ಪ್ರಾಂಶುಪಾಲರು ಪಿಇಎಸ್ ಪದವಿಪೂರ್ವ ಕಾಲೇಜು, ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ರಾಜ್ಯಾಧ್ಯಕ್ಷ ರಾದ ಶಿವಮೊಗ್ಗ ವಿನೋದ್, ಯೋಗ ತರಬೇತಿದಾರರಾದ ಶ್ರೀ ಮಹೇಂದ್ರ ರವರು ಉಪಸ್ಥಿತರಿದ್ದರು.