ಶಿವಮೊಗ್ಗ: ಸಣ್ಣ ಪತ್ರಿಕೆಗಳ ಸಂಕಷ್ಟಕ್ಕೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ನೆರವು ದೊರಕಿಸಲು ಬದ್ಧ ಎಂದು ವಿಧಾನ ಪರಿಷತ್ ಸದಸ್ಯ‌ ಡಿ.ಎಸ್. ಅರುಣ್ ತಿಳಿಸಿದರು.

ಅವರು ಇಂದು ಸಂಜೆ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ, ನವದೆಹಲಿಯ ಶಿವಮೊಗ್ಗ ಜಿಲ್ಲಾ ಘಟಕದಿಂದ ಅಭಿನಂದನೆ ಸ್ವೀಕರಿಸಿ, ಪತ್ರಿಕೆಗಳ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳಿಗೆ ಮಹತ್ವದ ಸ್ಥಾನವಿದೆ. ಆದರೆ ಇಂದು ಪತ್ರಿಕೆಗಳು ಸಂಕಷ್ಟವನ್ನೆದುರಿಸುತ್ತಿದ್ದು, ಇದಕ್ಕೆ ಸ್ಪಂದಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದರು.

ಗ್ರಾಮೀಣ ಪ್ರದೇಶದ ಪತ್ರಿಕೆಗಳಿಗೆ ಹಾಗೂ ಆನ್ ಲೈನ್ ಪೋರ್ಟಲ್ ಗಳಿಗೆ ಮುಂದಿನ ದಿನಗಳಲ್ಲಿ, ಜಿ.ಪಂ., ತಾ.ಫಂ. ಹಾಗೂ ಗ್ರಾ.ಪಂ ಮಟ್ಟದ ವಿಶೇಷ ಜಾಹೀರಾತುಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ.ಆರ್. ಷಡಾಕ್ಷರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ರಾಕೇಶ್ ಡಿಸೋಜಾ, ರಾಜ್ಯ ಉಪಾಧ್ಯಕ್ಷ ನರೇಂದ್ರಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಕಮಲಾಕ್ಷ, ಖಜಾಂಚಿ ಬಿ.ಸಿ. ಶಿವಕುಮಾರ್, ನಿರ್ದೇಶಕ ಸತೀಶ್ ಮುಂಚೆಮನೆ, ಪತ್ರಕರ್ತರಾದ ನವೀನ್ ತಲಾರಿ, ಸುರೇಂದ್ರ,ಮಂಜುನಾಥ್ ಶೆಟ್ಟಿ ,ನಿಖಿಲ್, ವಿಶ್ವನಾಥ್, ಬಿ.ಸಿ. ಗಿರೀಶ್, ಮೈಕೆಲ್ ಕೆನಿಥ್, ರಮೇಶ್, ಆನಂದ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…