ಬೆಟ್ಟ ಗುಡ್ಡ ಕಾಡಿನಲ್ಲಿ ಚಾರಣ ಮಾಡುವುದು ನಮ್ಮ ದೇಹದ ಎಲ್ಲಾ ಅಂಗಾಂಗಳ ದೃಡತೆಗೆ ಹಾಗೂ ಮನಃ ಸ್ಥೈರ್ಯಕ್ಕೆ ಸಹಕಾರಿ ಎಂದು, ನರಸಿಂಹ ಪರ್ವತ ಚಾರಣಕ್ಕೆಚಾಲನೆ ನೀಡಿದ ತರುಣೋದಯ ಘಟಕದ ಕಾರ್ಯಾರ್ಧ್ಯಕ್ಷ ಎಸ್.ಎಸ್.ವಾಗೇಶ್ ನುಡಿದರು.

ಕಾನನದಲ್ಲಿ ನಡೆಯುವುದು, ಶುದ್ಧ ಗಾಳಿ ಸೇವಿಸುವುದು, ಬೆಟ್ಟ ಗುಡ್ಡ ಹತ್ತುವುದು ದೇಹಕ್ಕೆ ಕಸುವು ಸಿಕ್ಕು ಆರೋಗ್ಯ ವೃದ್ಧಿಸುವುದರಲ್ಲಿ ಸಂದೇಹವಿಲ್ಲ. ನರಸಿಂಹ ಪರ್ವತಗಳ ಸಾಲು ಅದ್ವಿತಿಯ, ಕಾನನ, ಬಯಲು, ಬೆಟ್ಟ, ನದಿಗಳ ಉಗಮ, ಜರಿಗಳ ಕಲರವ, ಸೌಂದರ್ಯ ಆಸ್ವಾದ ಅವಿಸ್ಮರಣೀಯ. ಚಾರಣದ ಬಗ್ಗೆ ಹೇಳುವುದು ಕಷ್ಟ, ಅನುಭವಿಸುವುದು ಮನಃಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಮಾಡಿದರೆ ಸಾಹಸ ಇಂತಹದ್ದು. ಪರಿಚಯ ಇಲ್ಲದೇ ಇದ್ದರೂ, ಸಹಾಯ ಕೇಳದೆ ಇದ್ದರೂ, ದಿನವಿಡಿ ಒಬ್ಬರಿಗೊಬ್ಬರು ಸಹಕರಿಸುವುದು, ಮರೆತು ಹೋಗುತ್ತಿರುವ ಮಾನವೀಯತೆಯು, ಚಿರ ಸ್ಮರಣೀಯ.

ಪ್ರತಿ ದಿನ ಎಲ್ಲಾ ಅನುಕೂಲ ಗಳೊಂದಿಗೆ ಬದುಕು ಸಾಗಿಸುವುದಕ್ಕು ನಿರ್ಜನ ಪ್ರದೇಶದಲ್ಲಿ ಶುದ್ದ ಗಾಳಿ ಸೇವನೆ ಯೊಂದಿಗೆ ಸ್ವೇಚ್ಚೆಯಾಗಿ ತಿರುಗುವ ಅನುಭವ ಹೊಂದಿದವನೆ ಅದರ ಸವಿ ಬಲ್ಲ.ತರುಣೋದಯ ಘಟಕವು ಆಗಿಂದಾಗೆ ಈ ರೀತಿಯ ಚಾರಣಗಳನ್ನು ರಾಜ್ಯಾದ್ಯಂತ ಹಾಗೂ ರಾಷ್ಟ್ರಾದ್ಯಂತ ಕಾರ್ಯ ಕ್ರಮಗಳನ್ನು ವರ್ಷಪೂರ್ತಿ ನಡೆಸುತ್ತದೆ, ಜನಸಾಮಾನ್ಯರು ಅತ್ಯಂತ ಕಡಿಮೆ ವೆಚ್ಚದಲ್ಲಿ ಹಿಮಾಲಯ ತಪ್ಪಲಿನಲ್ಲಿ ಚಾರಣ ಹಮ್ಮಿಕೊಳ್ಳಬಹುದಾಗಿದೆ, ಸದಸ್ಯತ್ವಕ್ಕೆ ಮಥುರಾ ಪ್ಯಾರಡೈಸ್ ಕೆಳಮಹಡಿಯ ನಮ್ಮ ಕಛೇರಿಯಿಂದ ವಿವರ ಪಡೆಯ ಬಹುದಾಗಿದೆ
ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುರೇಶ್ ಕುಮಾರ್, ಜಿ.ವಿಜಯಕುಮಾರ್, ಪತ್ರಕರ್ತ ವೈದ್ಯ ಹವಾಲ್ದಾರ್, ಡಾ.ಪ್ರಕೃತಿ, ಡಾ.ಕೌಸ್ತುಭ,ಡಾ.ಶೇಖರ್ ಗೌಳೇರ್, ಡಾ.ಗಂಗಾಧರ್,ಡಾ.ಶ್ರೀಧರ್,ಡಾ.ಬಾಲಚಂದ್ರ,
ಡಾ.ಅಪರ್ಣ ಐವತ್ತು ಚಾರಣಿಗರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…