ಉಡುಪಿ ನ್ಯೂಸ್…

ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ನೆಲೆಸಿರುವ ಉಡುಪಿ ಮೂಲದ ಚಾರ್ವಿ ಶೆಟ್ಟಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್ ನ ಸಂಘಟನಾ ಸಿಬ್ಬಂದಿ ತಂಡದಲ್ಲಿ ಆಯ್ಕೆಯಾಗಿದ್ದು ಬಾಲ್ ಕಿಡ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಆಸ್ಟ್ರೇಲಿಯನ್ ಓಪನ್ ಟೆನಿಸ್ ನ ಪುರುಷರ ಹಾಗೂ ಮಹಿಳೆಯರ ಫೈನಲ್ ಪಂದ್ಯಾಟದ ಧ್ವಜವಂದನಾ ತಂಡದಲ್ಲೂ ಆಯ್ಕೆಯಾಗಿದ್ದಾರೆ.

ಆಸ್ಟ್ರೇಲಿಯಾದ ಮೆಲ್ಬರ್ನ್ ನ ಹ್ಯಾಲಿ ಬರೀ ಕಾಲೇಜಿನಲ್ಲಿ ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಚಾರ್ವಿ ಶೆಟ್ಟಿ ಸ್ವತಃ ಟೆನಿಸ್ ಅಟಗಾರ್ತಿ ಯಾಗಿದ್ದು ಉತ್ತಮ ಈಜುಪಟು ಆಗಿದ್ದು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುತ್ತಾರೆ ಹಾಗೂ ಉತ್ತಮ ಚಿತ್ರ ಕಲಾವಿದೆ ಯಾಗಿದ್ದಾರೆ.ಇವರು ಬಸ್ರೂರು ಕೋಳ್ಕೆರೆ ಅನಂತರಾಮಶೆಟ್ಟಿ ಮತ್ತು ಕೊರಂಗ್ರಪಾಡಿ ದೊಡ್ಡಮನೆ ಬೈಕಾಡಿ ಸುಶ್ಮಿತಾ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…