ಭಾರತೀಯ ಸೈನ್ಯದಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರೂರಾದ ಶಿವಮೊಗ್ಗಕ್ಕೆ ಆಗಮಿಸಿದ ಭಾರತೀಯ ಸೇನೆಯಲ್ಲಿ ಲ್ಯಾನ್ಸ್ ನಾಯಕರಾಗಿ ಸೇವೆಸಲ್ಲಿಸಿದ ವೀರಯೋಧ ಶ್ರೀಯುತ ಚಂದ್ರನಾಯಕ ರವರನ್ನು ರೋಟರಿ ಶಿವಮೊಗ್ಗ ಪೂರ್ವ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮತ್ತು ವೀರಯೋಧ ಚಂದ್ರನಾಯಕ್ ರವರ ಗ್ರಾಮವಾದ ಬೀರನಕೆರೆ ಗ್ರಾಮಸ್ಥರು ವೀರಯೋಧ ಚಂದ್ರನಾಯಕ ರವರನ್ನು ಸ್ವಾಗತಿಸಿ ನಗರಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಗ್ರಾಮದ ಯುವಕರು ರೋಟರಿ ಶಿವಮೊಗ್ಗ ಪೂರ್ವ ಮತ್ತು ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸದಸ್ಯರು ಒಳಗೊಂಡಂತೆ ಸುಮಾರು ಸಾರ್ವಜನಿಕರು ವೀರ ಯೋಧನನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಗೋಪಿ ವೃತ್ತದಲ್ಲಿ ರೋಟರಿ ಹಾಗೂ ಜೆಸಿಐ ವತಿಯಿಂದ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ವೀರಯೋಧ ಚಂದ್ರನಾಯಕ ರವರು ಮಾತನಾಡುತ್ತಾ ನನಗೆ ತುಂಬಾ ಸಂತೋಷವಾದ ದಿನ ನಾನು ಭಾರತೀಯ ಸೈನ್ಯದಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ತವರೂರಾದ ಶಿವಮೊಗ್ಗ ಜಿಲ್ಲೆಯ ಬೀರನಕೆರೆ ಗ್ರಾಮಕೆ ಆಗಮಿಸಿದ್ದು ಶಿವಮೊಗ್ಗ ನಗರದಲ್ಲಿ ನಮ್ಮ ಊರಿನ ಜನರು ಹಾಗೂ ರೋಟರಿ ಶಿವಮೊಗ್ಗ ಪೂರ್ವ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಸದಸ್ಯರು ನನ್ನನ್ನು ಇಷ್ಟು ಗೌರವಪೂರ್ವಕವಾಗಿ ಸನ್ಮಾನಿಸಿ ಸ್ವಾಗತಿಸಿ ರುವುದು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ.
ನಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ರಾಜಸ್ಥಾನ್, ಚಂಡಿಗಡ್, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಗಡಿ ರಕ್ಷಣೆಯಲ್ಲಿ ಸೇವೆ ಸಲ್ಲಿಸಿದ್ದು ಹೆಮ್ಮೆ ತಂದಿದೆ ಭಾರತಾಂಬೆಯ ರಕ್ಷಣೆಗೆ ನಮ್ಮ ಸೈನ್ಯ ಸದಾ ಸಿದ್ಧವಿರುತ್ತದೆ ಹಾಗಾಗಿ ನಾನು ಇನ್ನು ಹೆಚ್ಚಿನ ಯುವಕರಲ್ಲಿ ದೇಶಪ್ರೇಮ ಹಾಗೂ ನಮ್ಮ ದೇಶ ನಮ್ಮ ಗಡಿ ಎಂಬ ದೇಶಪ್ರೇಮದಿಂದ ಸೇನೆಗೆ ಸೇರಲು ವಿನಂತಿಸುತ್ತೇನೆ.ಇನ್ನು ಮುಂದಿನ ದಿನಗಳಲ್ಲಿ ನನ್ನ ನಿವೃತ್ತಿ ಜೀವನದಲ್ಲಿ ಇನ್ನೂ ಅನೇಕ ಯುವಕರಿಗೆ ಮಾರ್ಗದರ್ಶನ ನೀಡುತ್ತಾ ದೇಶದ ಬಗ್ಗೆ ಪ್ರೇಮವನ್ನು ಬೆಳೆಸಿಕೊಳ್ಳಲು ಕಾರ್ಯನಿರ್ವಹಿಸುತ್ತೇನೆ ಎಂದು ಈ ಮೂಲಕ ತಿಳಿಸುತ್ತೇನೆ ಹಾಗೂ ಈ ದಿನ ನಮ್ಮೆಲ್ಲರ ಆತ್ಮೀಯ ಪ್ರೀತಿಗೆ ನಾನೆಂದೂ ಚಿರಋಣಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಕಮಿನಿಟಿ ನಿರ್ದೇಶಕರಾದ ವಿಜಯ್ ಕುಮಾರ್ ರವರು ಮಾತನಾಡುತ್ತಾ ವೀರಯೋಧ ಚಂದ್ರನಾಯಕ ರವರು ಹಲವಾರು ದೇಶದ ಗಡಿಗಳಲ್ಲಿ ಸೇವೆ ಸಲ್ಲಿಸಿ ಈ ದಿನ ತವರೂರಾದ ಶಿವಮೊಗ್ಗಕ್ಕೆ ನಿವೃತ್ತಿಹೊಂದಿ ಆಗಮಿಸಿದ ಚಂದ್ರನಾಯಕ್ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದೇವೆ ಹಾಗೆ ಎಲ್ಲರ ಮನೆಯಲ್ಲಿ ಒಬ್ಬ ಯೋಧ ಇರಲೇಬೇಕೆಂದು ಚಂದ್ರ ನಾಯಕ ರವರ ಆಸೆಯಂತೆ ಯುವಕರಿಗೆ ದೇಶದ ಬಗ್ಗೆ ಅಭಿಮಾನ ಹಾಗೂ ಒಳ್ಳೆಯ ಮಾರ್ಗದರ್ಶನವನ್ನು ನಿಮ್ಮ ನಿವೃತ್ತಿ ಜೀವನದಲ್ಲಿ ನೀಡುತ್ತಾ ಬರಬೇಕಾಗಿ ಕೋರಿದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷರಾದ ಮಂಜುನಾಥ್ ಕದಂ, ಜೆಸಿಐ ಅಧ್ಯಕ್ಷರಾದ ಸತೀಶ್ ಚಂದ್ರ, ಹಾಗೂ ಸದಸ್ಯರಾದ ಗಣೇಶ ಎಸ್, ಮಲ್ಲಿಕಾರ್ಜುನ ಕಾನೂರು, ಅನುಷ್ಕ ಗೌಡ, ಶುಭಂ ಚಂದ್ರಹಾಸ್ ಶೆಟ್ಟಿ, ಸುರೇಂದ್ರ ಕೋಟ್ಯಾನ್, ಸಂತೋಷ್ ಕುಮಾರ್ ಇನ್ನೂ ಅನೇಕ ಸದಸ್ಯರು ಉಪಸ್ಥಿತರಿದ್ದರು.