ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕರಾದ ರಾಜುಗೌಡ (ನರಸಿಂಹ ನಾಯಕ)ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ನಿಜವಾದ ದೈವ ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ.ಆರ್. ಅವರು ಅಭಿಪ್ರಾಯಪಟ್ಟರು.

ರಾಜ್ಯದ ಇತಿಹಾದದಲ್ಲಿಯೇ ಮೊಟ್ಟಮೊದಲ ಬಾರಿಗೆ ಸುರಪುರದಲ್ಲಿ ಸುಮಾರು 500 ಅರ್ಹ ವಿದ್ಯಾರ್ಥಿಗಳಿಗೆ ಕೆಎಎಸ್ ಹಾಗು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.

ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತರಬೇತಿ ಪಡೆಯುವುದು ವಿದ್ಯಾರ್ಥಿಗಳ ಪಾಲಿಗೆ ಗಗನಕುಸುಮವಾಗಿತ್ತು.
ಆದರೆ ಸುರಪುರದ ಶಾಸಕರಾದ ರಾಜುಗೌಡ ಅವರು ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತು ತಾಯಿ ತಿಮ್ಮಮ್ಮ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಹಾಗು ಬೆಂಗಳೂರಿನ ವಿಜಯನಗರದ ಪ್ರತಿಷ್ಠಿತ ಸಾಧನ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಸುಮಾರು 500 ಜನ ವಿದ್ಯಾರ್ಥಿಗಳಿಗೆ ಹುಣಸಗಿ ಪಟ್ಟಣದ ನೀಲಕಂಠೇಶ್ವರ ಕಲ್ಯಾಣಮಂಟಪದಲ್ಲಿ ಆರು ತಿಂಗಳ ಅವಧಿಗೆ ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಒದಗಿಸಿರುವುದು ಐತಿಹಾಸಿಕ ಕಾರ್ಯವಾಗಿದ್ದು, ಬಡವಿದ್ಯಾರ್ಥಿಗಳ ಉನ್ನತ ಸರ್ಕಾರಿ ಕೆಲಸಗಳಿಗೆ ಸೇರಬೇಕೆನ್ನುವ ಕನಸಿಗೆ ದಾರಿದೀಪದಂತಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಡತನದ ಕಾರಣದಿಂದಾಗಿ ಸಾಕಷ್ಟು ಅವಕಾಶಗಳಿಂದ ವಂಚಿತರಾಗುತ್ತಿದ್ದು ಸರ್ಕಾರಿ ಸೇವೆಗಳಿಂದ ಮರೀಚಿಕೆ ಆಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ಶಾಸಕ ರಾಜುಗೌಡ ಅವರ ವಿನೂತನ ಪ್ರಯತ್ನ ಹಾಗು ವಿದ್ಯಾರ್ಥಿಪರ ಕಾಳಜಿ ಇಡೀ ರಾಜ್ಯಕ್ಕೆ ಒಂದು ಮೆಚ್ಚುಗೆಯ ಹಾಗು ಮಾದರಿ ಕೆಲಸವಾಗಿದೆ.
ಇಂತಹ ಅಭೂತಪೂರ್ವ ಸಮಾಜಮುಖಿ ಕೆಲಸಕ್ಕೆ ಚಾಲನೆ ನೀಡಿರುವ ಸುರಪುರದ ಶಾಸಕರು ಹಾಗು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಅಧ್ಯಕ್ಷರಾಗಿರುವ ರಾಜುಗೌಡ (ನರಸಿಂಹ ನಾಯಕ) ಅವರಿಗೆ ರಾಜ್ಯದ ಸಮಸ್ತ ವಿದ್ಯಾರ್ಥಿಗಳ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ.ಆರ್.ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…