ದಿನಾಂಕಃ-12-02-2022 ರಂದು ರಾತ್ರಿ ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ ರವರಿಗೆ ಠಾಣಾ ವ್ಯಾಪ್ತಿಯ ಟಿಪ್ಪುನಗರದ ವಾಸಿ ಅಡ್ಡು @ ಇಬ್ರಾಹಿಂ ಈತನು ಪದ್ಮಾ ಟಾಕೀಸ್ ಕಡೆಯಿಂದ ಅಂಬೇಡ್ಕರ್ ನಗರದ ಕಡೆಗೆ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದಾನೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

ಆರೋಪಿ ಅಡ್ಡು @ ಇಬ್ರಾಹಿಂ, 28 ವರ್ಷ, ಟಿಪ್ಪುನಗರ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 97,000/- ರೂಗಳ 03 ಕೆಜಿ 250 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ವಶ ಪಡಿಸಿಕೊಂಡು ಗುನ್ನೆ ಸಂಖ್ಯೆ 0065/2022 ಕಲಂ 20(b), 20(11) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ…