ಶಿವಮೊಗ್ಗ: ಹಿಜಾಬ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಹೇಳಿಕೆ ತೀರಾ ಹಾಸ್ಯಾಸ್ಪದ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಆರೋಪಿಸಿದ್ದಾರೆ. 

ಹಿಜಾಬ್ ಕಡ್ಡಾಯವಿರುವ ಪಾಕಿಸ್ತಾನದಲ್ಲಿ ವಾರ್ ಸಂಸ್ಥೆಯ ವರದಿ ಪ್ರಕಾರ 2015 ರಿಂದ 20 ರ ಅವಧಿಯಲ್ಲಿ 22 ಸಾವಿರ ಅತ್ಯಾಚಾರ ಪ್ರಕರಣ ದಾಖಲಾಗಿವೆ. ಈ ಪ್ರಕರಣಗಳು ಬಹುತೇಕ ಕುಟುಂಬಸ್ಥರಿಂದಲೇ ನಡೆಯುತ್ತಿರುವುದು ದುರಂತದ ಸಂಗತಿಯಾಗಿದೆ. ಈ ವಿಷಯ ಬಹುಶಃ ಜಮೀರ್ ಅಹಮ್ಮದ್ ಅವರಿಗೆ ತಿಳಿದಿರಕ್ಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.ಶಾಲಾ, ಕಾಲೇಜ್ ಗಳಲ್ಲಿ ಹಿಜಾಬ್ ಹಾಕಿಕೊಂಡರೆ ಅತ್ಯಾಚಾರ ಕಡಿಮೆಯಾಗುತ್ತೆ ಎಂಬ ಹೇಳಿಕೆಯನ್ನು ಜಮೀರ್ ನೀಡಿದ್ದಾರೆ. ಇದೊಂದು ಹಾಸ್ಯಾಸ್ಪದ ಹೇಳಿಕೆಯಾಗಿದೆ.

ಸರ್ಕಾರ ಶಾಲಾ, ಕಾಲೇಜ್ ಗಳಲ್ಲಿ ಸಮವಸ್ತ್ರ ಸಂಹಿತೆ ಕಡ್ಡಾಯವಾಗಿ ಪಾಲಿಸಲು ಹಿಜಾಬ್ ಧರಿಸದಂತೆ ಆದೇಶ ನೀಡಿದೆ. ನಿಮ್ಮ ಪ್ರಕಾರ ಶಾಲೆ, ಕಾಲೇಜ್ ಗಳಲ್ಲಿ ಅತ್ಯಾಚಾರ ನಡೆಯುತ್ತದೆಯೇ? ವಿದ್ಯಾಲಯದ ಬಗ್ಗೆ ಇಂತಹ ಕೆಟ್ಟ ಮನಸ್ಥಿತಿ ಹೊಂದಿರುವ ನಿಮ್ಮ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.ಹಿಂದೂ ಹೆಣ್ಣುಮಗಳನ್ನು ಷಡ್ಯಂತ್ರದ ಮೂಲಕ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ವ್ಯವಸ್ಥಿತವಾಗಿ ಲವ್ ಜಿಹಾದ್ ಕರಾಳತೆ ಇರುವ ಬಗ್ಗೆ ತಾವು ಎಂದಾದರೂ ವಿರೋಧ ವ್ಯಕ್ತಪಡಿಸಿದ್ದೀರಾ? ಹಿಜಾಬ್ ಪದ್ಧತಿಗೆ ಕೋಮುವಾದದ ಬಣ್ಣ ಬಳಿದು ಶಾಲಾ, ಕಾಲೇಜಿನ ಪವಿತ್ರ ಪರಿಸರದಲ್ಲಿ ಅಪನಂಬಿಕೆಯ ಅಸಮಾನತೆ ಹೇರುತ್ತಿರುವ ಜಮೀರ್ ಅವರ ಕೊಳಕು ಮನಸ್ಸಿಗೆ ಧಿಕ್ಕಾರವಿರಲಿ ಎಂದು ಕಾಂತೇಶ್ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…