
ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ತಾಲೂಕು ಘಟಕದ ವತಿಯಿಂದ ಉಪ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.



ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ 23 ಆನೆಗಳಿದ್ದು ವೀಕ್ಷಕರ ಸಂದರ್ಶಕರ ಸಮಯವನ್ನು ಬೆಳಿಗ್ಗೆ 8.00 ರಿಂದ 11.30 ರ ವರೆಗೆ ನಿಗದಿಪಡಿಸಿದ್ದಾರೆ. ಆದರೆ ದೂರದ ಊರುಗಳಿಂದ ಬರುವ ವೀಕ್ಷಕರಿಗೆ ಈ ಸಮಯವು ತುಂಬಾ ಕಡಿಮೆಯಾಗಿರುತ್ತದೆ,
ಆದ್ದರಿಂದ ಈಗಿರುವ ಸಮಯದ ಬದಲಾಗಿ 23 ಆನೆಗಳನ್ನು ಎರಡು ಅವಧಿ ಯಂತೆ ವೀಕ್ಷಕರ/ ಸಂದರ್ಶಕರ ಅನುಕೂಲಕ್ಕಾಗಿ ಸಮಯವನ್ನು ಬೆಳಗ್ಗೆ 8 ರಿಂದ 11 30 ರವರಿಗೆ 10 ಆನೆಗಳ ವೀಕ್ಷಣೆ ಹಾಗೂ 11.30 ರಿಂದ ಸಂಜೆ 4.30 ರವರೆಗೆ ಉಳಿದ ಆನೆಗಳನ್ನು ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕಾಗಿ ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಬಿ ಆರ್ ಬಸವರಾಜ್ ನಗರ ಅಧ್ಯಕ್ಷರಾದ ಮಂಜು ಆರ್, ಟಿ, ಆರ್ ಹಾಗೂ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಸಂಜು ಮತ್ತು ನಗರ ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.