15/02/2022 ಮಂಗಳವಾರ ಸಂಜೆ ಶಿವಮೊಗ್ಗ ನಗರದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಮಾನ್ಯ ಶ್ರೀ ನಾಗರಾಜ್ ರವರಿಗೆ, ಸರ್ಕಾರಿ ಕನ್ನಡ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯ (ಮೈನ್ ಮಿಡ್ಲ್ ಸ್ಕೂಲ್) ಹಳೆ ವಿದ್ಯಾರ್ಥಿಗಳ ಸಂಘ ದಿಂದ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಈ ಶಾಲೆಯು 132 ವರ್ಷದ ಇತಿಹಾಸವಿದೆ, ಮೈನ್ ಮಿಡ್ಲ್ ಸ್ಕೂಲ್ ಸ್ಮಾರ್ಟ್ ಸಿಟಿ ಅಭಿವೃದ್ಧಿಯ ಕಾಮಗಾರಿಯಿಂದ ಮಕ್ಕಳಿಗೆ ಎರಡು ವರ್ಷಗಳಿಂದ ಕೊಠಡಿಗಳ ಕೊರೆತೆ ಯಿಂದ ಪಾಠ ಪ್ರವಚನಗಳಿಗೆ ತೊಂದರೆ ಅಗುತ್ತಿದೆ. ಕಾಮಗಾರಿ ಮುಗಿದ ಕೊಠಡಿಗಳನ್ನು ಬೇಗನೆ ನೀಡಿ. ಮೊದಲು ಕನ್ನಡ ಮಾಧ್ಯಮ ವಿದ್ದು ನಂತರ 2012/13 ಸಾಲಿನಲ್ಲಿ 6 ಮತ್ತು 7ನೇ ತರಗತಿ ಆಂಗ್ಲ ಮಾಧ್ಯಮಕ್ಕೂ ಅವಕಾಶ ನೀಡಿದ್ದು, ಅದಕ್ಕೆ ಸಮರ್ಪಕವಾಗಿ ಇಂಗ್ಲಿಷ್ ಪಾಠ ಮಾಡಲು ಶಿಕ್ಷಕರನ್ನು ನೀಡದ ಕಾರಣ ಅದು ನೆನೆಗುದಿಗೆ ಬಿದ್ದಿದೆ. ಹಲವು ಸರ್ಕಾರಿ ಶಾಲೆಗಳಿಗೆ ಆಂಗ್ಲ ಮಾಧ್ಯಮಕ್ಕೆ ಒಂದನೇ ತರಗತಿಯಿಂದ ಅವಕಾಶ ನೀಡಿದಂತೆ 132 ವರ್ಷದ ಇತಿಹಾಸ ಹೊಂದಿದ ಮೈನ್ ಮಿಡ್ಲ್ ಸ್ಕೂಲ್ ಗೆ ಈ ಶೈಕ್ಷಣಿಕ ಸಾಲಿನಿಂದಲೇ ಕೆಪಿಎಸ್ ಅಡಿ LKG ಮತ್ತು UKG ಜೋತೆಗೆ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡಿ, ಅದರ ಜೋತೆ ಇಂಗ್ಲಿಷ್ ಪಾಠ ಮಾಡುವ ಶಿಕ್ಷಕರನ್ನು ನೀಡಿ.

ಈ ಶಾಲೆಯು ಹಲವು ವರ್ಷಗಳ ಹಿಂದೆ ಮಕ್ಕಳಿಗೆ ಆಟವಾಡಲು ವಿಶಾಲವಾದ ಮೈದಾನವಿತ್ತು, ಶಾಲಾವರಣದಲ್ಲಿ ಕನ್ನಡ, ತಮಿಳು, ಉರ್ದು, ಶಾಲೆಗಳು ಮಾತ್ರ ವಿತ್ತು, ಈಗ ಶಾಲಾವರಣ ಬಿ ಹೆಚ್ ರಸ್ತೆ ಅಗಲೀಕರಣ ದಿಂದ 20ಕ್ಕೂ ಹೆಚ್ಚು ಆಡಿ ಕಾಂಪೌಂಡ್ ಒಳಗೆ ಬಂದಿದೆ. ಮತ್ತೆ ಆವರಣದಲ್ಲಿ ಗರ್ಲ್ಸ್ ಹೈ ಸ್ಕೂಲ್, ಪದವಿ ಪೂರ್ವ ಕಾಲೇಜು ಇನ್ನೂ ಹಲವು ಕಟ್ಟಡಗಳು ತಲೆ ಎತ್ತಿವೆ, ಇರುವ ಆಟದ ಮೈದಾನದಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕೀಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಇವುಗಳಿಗೆ ನಿಯಂತ್ರಿಸಲು ಒಬ್ಬ ಡಿ ಗ್ರೂಪ್ ಸಿಬ್ಬಂದಿಯ ನೀಡಿ ಸಾರ್ವಜನಿಕ ವಾಹನಗಳು ಶಾಲಾವರಣದಲ್ಲಿ ನೀಷೇಧಿಸಿ, ಸಣ್ಣ ಸಣ್ಣ ಮಕ್ಕಳಿಗೆ ಸ್ವಚ್ಛಂದವಾಗಿ ಸಂತೋಷದಿಂದ ಶಾಲಾವರಣದಲ್ಲಿ ಆಟವಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತವೆ. ಎಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳಿಗೆ ಬೇಗನೆ ಕೊಠಡಿಯನ್ನು ನೀಡಲು ಅವಕಾಶ ಮಾಡಲಾಗುವುದು, 6 ಮತ್ತು 7ನೇ ತರಗತಿಗೆ ಇಂಗ್ಲಿಷ್ ಪಾಠ ಮಾಡಲು ಶಿಕ್ಷಕರನ್ನು ಒದಗಿಸಲಾಗುವುದು, ಈ ಸಾಲಿನಿಂದಲೇ ಕೆಪಿಎಸ್
ಪಬ್ಲಿಕ್ ಸ್ಕೂಲ್ ಆಡಿ ಈ ಸಾಲಿನಿಂದಲೇ lKG ಮತ್ತು UKG ಹಾಗೂ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು, ಹಾಗೂ ಶಾಲಾವರಣದಲ್ಲಿ ಯಾವುದೇ ರೀತಿಯ ವಾಹನಕ್ಕೆ ಅವಕಾಶ ನೀಡುವುದಿಲ್ಲ ಅಲ್ಲಿಗೆ ವಾಚಮಾನ್ ನೇಮಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಪರಶುರಾಮ, ಕಾರ್ಯದರ್ಶಿ ಶ್ರೀ ಮತಿ ಸವಿತಾ ವೆಂಕಟೇಶ್, ಖಜಾಂಚಿ ಶ್ರೀ ಪ್ರಕಾಶ್, ಸಹ ಕಾರ್ಯದರ್ಶಿ ಶ್ರೀ ಯತೀಶ್ ರಾಜ್, ನಿರ್ದೇಶಕರಾದ, ಶ್ರೀ ರಾಮು, ಶ್ರೀ ವಿಶ್ವನಾಥ್, ಶ್ರೀ ರಮೇಶ್, ಶ್ರೀ ಚಂದ್ರನಾಯ್ಕ, ಕುಬೇಂದ್ರ, ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…