ಶಿವಮೊಗ್ಗ: ಜೈಲಿನೊಳಗೆ ಮಾದಕ ವಸ್ತು ಗಾಂಜಾ ಎಸೆಯುತ್ತಿದ್ದ ಸಂದರ್ಭದಲ್ಲೇ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸೋಗಾನೆ ಕಾರಾಗೃಹದ ಒಳಗೆ ಅಕ್ರಮವಾಗಿ ಗಾಂಜಾ ಎಸೆಯುತ್ತಿದ್ದ ಆರ್.ಎಂ.ಎಲ್. ನಗರದ ಅಜರುದ್ದೀನ್(24) ಕ್ಲಾರ್ಕ್ ಪೇಟೆಯ ಮಹಮ್ಮದ್ ಫೈಸಲ್(20), ಭರ್ಮಪ್ಪ ನಗರದ ರೋಷನ್ ಜಮೀರ್(19) ಅವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 9000 ರೂ. ಮೌಲ್ಯದ 240 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, 1 ಮೊಬೈಲ್, ಕೃತ್ಯಕ್ಕೆ ಬಳಸಿದ ಮೊಪೆಡ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತಿ ಮೇರೆಗೆ ತುಂಗಾನಗರ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿಗಳ ತಂಡ ಕಾರಾಗೃಹದ ಪಶ್ಚಿಮ ಕಾಂಪೌಂಡ್ ಹಿಂಭಾಗ ಕಾಯುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಈ ಮೂವರು ಪ್ಲಾಸ್ಟಿಕ್ ಕವರ್ ಸುತ್ತಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಎಸೆಯುವಾಗ ಬಂಧಿಸಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…