ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಹಾಗೂ ಸದನದಲ್ಲಿ ಅಸಂವಿಧಾನಿಕ ತೋರಿದ ಸಚಿವ ಈಶ್ವರಪ್ಪರನ್ನು ವಜಾ ಮಾಡಲು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬಿಜೆಪಿ ಕಚೇರಿ ಮುತ್ತಿಗೆ – 40ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧಿಸಲಾಯಿತು.

ಸಚಿವ ಕೆಎಸ್ ಈಶ್ವರಪ್ಪನವರು ಸಂವಿಧಾನಾತ್ಮಕವಾದ ಸ್ಥಾನದಲ್ಲಿದ್ದು ರಾಷ್ಟ್ರಧ್ವಜಕ್ಕೆ ಅವಮಾನಿಸಿರುವುದು ಹಾಗೂ ರಾಜ್ಯದ ದೇಗುಲ ವಿಧಾನಸೌಧದಲ್ಲಿ ಸಚಿವ ಕೆಎಸ್ ಈಶ್ವರಪ್ಪನವರು ನಿನ್ನೆ ದಿವಸ ಅಸಂವಿಧಾನಿಕವಾಗಿ ಏಕವಚನ ಹಾಗೂ ಏರುಧ್ವನಿಯಲ್ಲಿ ಮಾತನಾಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ ಸಂವಿಧಾನದ ಆಶಯದಂತೆ ಪ್ರಮಾಣವಚನ ಸ್ವೀಕರಿಸಿರುವ ಸಚಿವ ಈಶ್ವರಪ್ಪ ನವರು ದೇಶದ ಭಾವೈಕ್ಯತೆಗೆ ಧಕ್ಕೆ ಉಂಟುಮಾಡುವ ಪ್ರಚೋದನ ಕಾರಿ ಹೇಳಿಕೆಗಳನ್ನು ನೀಡುತ್ತಾ ದೇಶದ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವುದು ಬಿಜೆಪಿಯ ಸಂವಿಧಾನ ವಿರೋಧಿ ಸಂಸ್ಕೃತಿ ಎದ್ದು ತೋರುತ್ತದೆ. ಕರ್ನಾಟಕದಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿಯು ದಿನನಿತ್ಯ ಬಿಜೆಪಿಯ ಸಚಿವರು ಶಾಸಕರುಗಳು ಹಾಗೂ ನಾಯಕರುಗಳು ದೇಶದ ಕೋಮುಸೌಹಾರ್ದ ಭಾವೈಕ್ಯತೆಯನ್ನು ಇದಕ್ಕೆ ಮಾಡುವಂತಹ ಹೇಳಿಕೆ ನೀಡಿ ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದನ್ನು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬಿಜೆಪಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು ಈ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ನಾವೆಲ್ಲರೂ ಒಂದೇ ಭಾರತೀಯರು ಎಂಬ ಮನೋಭಾವನೆಯನ್ನು ಜನರಲ್ಲಿ ಮೂಡಿಸುವುದರ ಬದಲಾಗಿ ಸಚಿವ ಕೆಎಸ್ ಈಶ್ವರಪ್ಪನವರೇ ಜನರಲ್ಲಿ ಜಾತಿ ಧರ್ಮದ ಬೀಜವನ್ನು ಬಿತ್ತುತ್ತಿದ್ದಾರೆ. ಕೂಡಲೇ ಮಾನ್ಯ ಘನವೆತ್ತ ರಾಜ್ಯಪಾಲರು ಇಂತಹ ದೇಶದ್ರೋಹಿ ಸಚಿವರನ್ನು ವಜಾ ಮಾಡಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ , ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ , ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ .ಪಿ. ಗಿರೀಶ್, ರಾಜ್ಯ ಯುವ ಕಾಂಗ್ರೆಸ್ ಮುಖಂಡ ಟಿವಿ ರಂಜಿತ್ ,ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ಎಸ್ .ಕುಮಾರೇಶ್ , ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಈಟಿ ನಿತಿನ್ , ಭದ್ರಾವತಿ ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಆಫ್ತಬ್ ಅಹಮದ್ ಪದಾಧಿಕಾರಿಗಳಾದ ಗಗನ್ ಗೌಡ, ಪಿ. ಅರ್ಜುನ್ ರಾಕೇಶ್ , ಕಲ್ಲೂರು ವೆಂಕಟೇಶ್ , ಇರ್ಫಾನ್ , ಪುಷ್ಪಕ್ ಕುಮಾರ್ , ನದೀಮ್, ನವೀನ್ ನಿಖಿಲ್ ಮೂರ್ತಿ, ದೇವರಾಜ್, ಇನಾಯಥ, ಕೆ.ಎಲ್. ಪವನ್, ಅಭಿಷೇಕ್, ಸುಹಾಸ್ ಗೌಡ , ದರ್ಶನ್ ನಿರ್ವಾನ್ ವಿಶಾಲ್ ಗುಜರ್ ,ಎನೋಷ,ಒನ್ನೇಶ್, ಗೋಪಿ, ಮಂಜು ಮತ್ತೊಡ್ , ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…