ಹೌದು ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರ ತವರೂರಿನಲ್ಲಿ ದೇಶಕ್ಕಾಗಿ ನಾವು ಸಂಘಟನೆ ಜಾತಿ ಧರ್ಮ ಮತ ಹಾಗೂ ರಾಜಕೀಯ ಗಳನ್ನು ಬದಿಗೊತ್ತಿ ತನ್ನ ನಿರಂತರ ಸೇವೆಯನ್ನು ಸಲ್ಲಿಸಿರುವುದು ಗಮನಾರ್ಹ ವಿಷಯ. ” ದೇಶಕ್ಕಾಗಿ ನಾವು ” ತೀರ್ಥಹಳ್ಳಿಯ ಭಾಗದಲ್ಲಿರುವ ಜನರು ಈ ಸಂಘಟನೆಯ ಹೆಸರು ಕೇಳದಿರುವುದಕ್ಕೆ ಸಾಧ್ಯವೇ ಇಲ್ಲ ಇದಕ್ಕೆ ಕಾರಣ ಈ ಸಂಘಟನೆಯ ಜನೋಪಕಾರಿ ಕೆಲಸಗಳು. ಲಾಕ್ ಡೌನ್ ನಂತರ ಆರ್ಥಿಕವಾಗಿ ತತ್ತರಿಸಿದ ಎಷ್ಟೋ ಕುಟುಂಬಗಳಿಗೆ ದೇಶಕ್ಕಾಗಿ ನಾವು ಸಂಘಟನೆ ಸಹಾಯ ಮಾಡಿದ ನಿದರ್ಶನಗಳುಂಟು.

ಪ್ರಸ್ತುತ ಈ ಸಂಘಟನೆಯ ಬಗ್ಗೆ ಬರೆಯಲು ಮುಖ್ಯ ಉದ್ದೇಶ ಅವರ ಹೊಸ ಅಭಿಯಾನ, ” ನಮ್ಮ ಊರ ಭವಿಷ್ಯ ನಾವೇ ಕಟ್ಟೋಣ ” . ಈ ಅಭಿಯಾನದ ಅಡಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೆಕೊಪ್ಪ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಡುಗೋಡಿ ಶಾಲೆಯ ಶೌಚಾಲಯಕ್ಕೆ ಬಣ್ಣ ಹಚ್ಚಿ ಸುಸ್ಥಿತಿಗೆ ತರಲಾಗಿದೆ. ಕೆಲವು ಓದುಗರಿಗೆ ಇದೊಂದು ಸಾಧಾರಣ ವಿಷಯ ಎನ್ನಿಸಬಹುದು ಆದರೆ ನಿಮ್ಮ ಮಕ್ಕಳೆ ಶಾಲೆಗೆ ಹೋಗುತ್ತಿದ್ದರೆ ಇದು ನಿಮಗೆ ಪ್ರಮುಖ ವಿಷಯ ಎನಿಸುತ್ತದೆ. ಮಲೆನಾಡು ಭಾಗದಲ್ಲಿ ಅನೇಕರು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದವರು ತುಂಬ ಯಶಸ್ಸನ್ನು ಸಾಧಿಸುತ್ತಾರೆ ಕೂಡ. ಇಲ್ಲಿ ಮುಖ್ಯವಾಗಿ ಗಮನ ಸೆಳೆದ ವಿಷಯವೇನೆಂದರೆ ಈ ಶೌಚಾಲಯದ ವಿಷಯವಾಗಿ ಅನಾಮಿಕರೊಬ್ಬರು ದೇಶಕ್ಕಾಗಿ ನಾವು ಸಂಘಟನೆಗೆ ಕರೆ ಮಾಡಿ ತಿಳಿಸಿದ್ದು.

ಇದರಲ್ಲಿ ದೇಶಕ್ಕಾಗಿ ನಾವು ಸಂಘಟನೆಯ ಮೇಲೆ ಆ ವ್ಯಕ್ತಿಗಿರುವ ನಂಬಿಕೆ ತಿಳಿಯಬಹುದು ಹಾಗೆಯೇ ಆ ನಂಬಿಕೆಯನ್ನು ಹುಸಿಯಾಗಿಸಿದೇ ತಕ್ಷಣ ಕಾರ್ಯಪ್ರವೃತ್ತರಾಗಿ ಆ ಶಾಲೆಯನ್ನು ಸುಸ್ಥಿತಿಗೆ ತಂದ ದೇಶಕ್ಕಾಗಿ ನಾವು ಸಂಘಟನೆ ಎಲ್ಲ ಕಾರ್ಯಕರ್ತರಿಗೆ ಟೀಮ್ ಪ್ರಜಾಶಕ್ತಿಯ ವತಿಯಿಂದ ಧನ್ಯವಾದಗಳು .
ಹಾಗೆಯೇ ಈ ವಿಷಯವಾಗಿ ಕರೆ ಮಾಡಿದ ಆ ವ್ಯಕ್ತಿಯ ನಂಬಿಕೆ ತನ್ನ ಆಳುತ್ತಿರುವ ಸರ್ಕಾರದ ಮೇಲೂ ಬರಬೇಕು. ಆಗ ಮಾತ್ರ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಅರ್ಥ ಸಾರ್ಥಕವಾಗುತ್ತದೆ.
ಈ ಲೇಖನದ ಮೂಲ ಉದ್ದೇಶ ಕೆಲಸ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸುತ್ತಾ ಇನ್ನೂ ಹೆಚ್ಚಿನ ಅಭಿವೃದ್ಧಿಗಳ ಆಗಲಿ ಎನ್ನುವುದು.

ನೂತನ್ ಮೂಲ್ಯ
ಸಂಪಾದಕರು
ಪ್ರಜಾಶಕ್ತಿ…