
ಶಿವಮೊಗ್ಗ: ಸಮಾಜಶಾಸ್ತ್ರ ಅಧ್ಯಯನ ಇಂದಿನ ದಿನ ಅತ್ಯಂತ ಪ್ರಸ್ತುತವಾಗಿದೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು ಎಂದು ತಂಬಾಕು ಮಂಡಳಿಯ ಮುಖ್ಯಸ್ಥರಾದ ಹೇಮಂತ್ ರಾಜ್ ಅರಸ್ ರವರು ತಿಳಿಸಿದರು.



ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗ ಮಾತನಾಡುತ್ತ,
ವಿದ್ಯಾರ್ಥಿಗಳ ಜೀವನ ಬಂಗಾರದಂತೆ ಎನ್ನುವ ಮಾತು ಸತ್ಯ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಕೆಟ್ಟ ಹವ್ಯಾಸವನ್ನು ದೂರವಿಟ್ಟು ವಿದ್ಯಾರ್ಜನೆ ಮಾಡಬೇಕು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆ ಹೆಚ್ಚಾಗುತ್ತಿರುವುದಕ್ಕಾಗಿ ಕಳವಳ ವ್ಯಕ್ತಪಡಿಸಿದರು. ತಂಬಾಕಿನಿಂದ ಶುರುವಾದ ಈ ಕೆಟ್ಟ ಹವ್ಯಾಸ ಇತರೆ ಕೆಟ್ಟ ಹವ್ಯಾಸಕ್ಕೆ ದಾರಿಯಾಗುತ್ತದೆ ಎಂದರು, ಸಮಾಜಶಾಸ್ತ್ರ ಕಲಿಯಲು ಬಂದ ವಿದ್ಯಾರ್ಥಿಗಳಾದ ನಿಮಗೆ ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ, ನಿಮ್ಮ ಮೆಲೆ ಜವಾಬ್ದಾರಿ ಹೆಚ್ಚಿರುತ್ತದೆ, ಹಾಗಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಬಿ.ಧನಂಜಯ ರವರು ಮಾತನಾಡುತ್ತ, ಸಮಾಜದಲ್ಲಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲು ಸಮಾಜಶಾಸ್ತ್ರ ಅಧ್ಯಯನ ಅತೀ ಅವಶ್ಯಕವಾಗಿದೆ ಎಂದು ತಿಳಿಸಿದರು.

ಕುಮಾರಿ ಯಶಸ್ವಿನಿ ಸ್ವಾಗತಿಸಿದರು, ವಿಭಾಗದ ಮುಖ್ಯಸ್ತರಾದ ಪೂರ್ವಾಚಾರ್ ರವರು ಪ್ರಾಸ್ಥಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ಮಲ್ಲಿಕಾರ್ಜುನ ಮೇಟಿಯವರು, ನೂತನವಾಗಿ ಸಮಾಜ ಶಾಸ್ತ್ರ ಕಲಿಯಲು ಪ್ರಥಮ ಬಿ.ಎ.ಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಯಾವರೀತಿ ಇರಬೇಕು, ಹೇಗೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಆಂಗ್ಲಭಾಷ ಉಪನ್ಯಾಸಕರಾದ ಸಿರಾಜ್, ಶಿವಾನಂದ ಸ್ವಾಮಿ, ಸಮಾಜಶಾಸ್ತ್ರ ಉಪನ್ಯಾಸಕಿ ಕೃಪಾಲಿನಿ, ಲಕ್ಷ್ಮೀ, ಉಪಸ್ಥಿತರಿದ್ದರು. ತಂಬಾಕು ಮಂಡಳಿಯ ಅಧಿಕಾರಿಯಾದ ರವಿರಾಜ್ ಅರಸ್ ರವರು ಉಪಸ್ಥಿತರಿದ್ದರು.