ಮೊನ್ನೆ ದಿವಸ ವಿಧಾನಸಭೆಯಲ್ಲಿ ಅಸಂವಿಧಾನಿಕವಾಗಿ ನಡೆದುಕೊಂಡ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪನವರ ವಿರುದ್ಧ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನ 40 ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ಬಂದಿಸಿ, ನಿನ್ನೆ ದಿವಸ 15 ಜನ ಯುವ ಕಾಂಗ್ರೆಸ್ ಮುಖಂಡರ ಮೇಲೆ ಸುಮೋಟೋ ಅಧಿಕಾರದಲ್ಲಿ ದೊಡ್ಡಪೇಟೆ ಠಾಣೆಯಲ್ಲಿ FIR ದಾಖಲಾಗಿದ್ದು.

ಆದರೆ ನಿನ್ನೆ ಸಂಜೆ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ರವರನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನೂರಾರು ಬೈಕ್ ರ್ಯಾಲಿ ಮುಖಾಂತರ ಸ್ವಾಗತಿಸಿದ್ದು 144 ಸೆಕ್ಷನ್ ಜಾರಿಯಿದ್ದರು ಸಚಿವರನ್ನು ಸ್ವಾಗತಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಇದುವರೆಗೂ ಯಾವುದೇ ಕೇಸ್ ದಾಖಲಾಗಿಲ್ಲ ಇದು ಸರಿಯೇ ಎಂದು ಕೇಳಿದ್ದಾರೆ.

ಈ ವಿಚಾರವಾಗಿ ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷರು ಡಿ.ಕೆ. ಶಿವಕುಮಾರ್ ರವರು ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ನಿನ್ನೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಮೇಲೆ FIR ಹಾಕಿರುವ ವಿಚಾರವಾಗಿ ಮಾತನಾಡಿ ಮಾಹಿತಿ ಪಡೆದು ಹಾಗೂ ನಿನ್ನೆ ಸಂಜೆ ಶಿವಮೊಗ್ಗ ನಗರಕ್ಕೆ ಆಗಮಿಸಿದ ಸಚಿವರಾದ ಕೆ ಎಸ್ ಈಶ್ವರಪ್ಪ ರವರನ್ನು ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನೂರಾರು ಜನ ಗುಂಪುಗೂಡಿ ಸ್ವಾಗತಿಸಿದ್ದು 144 ಸೆಕ್ಷನ್ ಉಲ್ಲಂಘನೆ ಮಾಡಿರುವ ಸಚಿವ ಕೆbಎಸ್ ಈಶ್ವರಪ್ಪ ನವರು ಹಾಗೂ ಮುಖಂಡರು ಕಾರ್ಯಕರ್ತರು ಮೇಲೆ ಕೇಸ್ ದಾಖಲಿಸಲು ಎಸ್ಪಿಯವರಿಗೆ ಆಗ್ರಹಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…