ಶಿವಮೊಗ್ಗ: ಮೂಲಕ್ಕೆ ದಕ್ಕೆಯಾಗದಂತೆ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಿಸುವ ಕಲೆಗಳನ್ನು ಹಿಂದಿನ ಕವಿಗಳು ನಾಟಕ, ಸಾಹಿತ್ಯ ಇದರ ಮೂಲಕ ನಮಗೆ ನೀಡಿದ್ದಾರೆ ಎಂದುಡಾ. ಕೆ. ಕೇಶವಶರ್ಮ, ನಿವೃತ್ತ ಪ್ರಾಧ್ಯಾಪಕರು ಮತ್ತು ವಿಮರ್ಶಕರು ಹೇಳಿದರು ಅವರು ಇಂದು ಸಹ್ಯಾದ್ರಿ ಹೇಳಿದರು ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾನಿಲಯ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ಭಾರತದಲ್ಲಿ ಭಾಷಾಂತರ ಅಧ್ಯಯನ ಮತ್ತು ಸವಾಲುಗಳು ಎಂಬ ವಿಷಯದ ಬಗ್ಗೆ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಚಿಂತಕರು ಹಾಗೂ ನಿವೃತ್ತ ಪ್ರಾಧ್ಯಾಪಕರು, ಮೈಸೂರು ಇವರು ದಿಕ್ಸೂಚಿ ಭಾಷಣ ಮಾತನಾಡುತ್ತ, ಅನುವಾದವೆಂದರೆ ಸಂಸ್ಕೃತಿಯ ವಿಸ್ತರಣೆ ಮತ್ತು ಸಂಸ್ಕೃತಿ ಗ್ರಹಿಕೆಯ ಮುಖ್ಯ ಕೆಲಸ ಎಂದರು.

ಒಂದು ಭಾಷೆಯ ಅನುವಾದದೊಂದಿಗೆ ಆ ಬಾಷೆಯಲ್ಲಿರುವ ಸಂಸ್ಕೃತಿ ಪರಿಚಯವಾಗುತ್ತದೆ. ಅನುವಾದವನ್ನು ನಮ್ಮ ಕಾಲಕ್ಕೆ ಹೊಂದಿಸಿಕೊಂಡು ಅದಕ್ಕೆ ಮರುಜೀವ ನೀಡುವುದು ನಿಜವಾದ ಅನುವಾದ.

ಮತ್ತೊಂದು ಭಾಷೆಯ ಅನುವಾದ ಮಾಡಲು ನಮಗೆ ಕನಿಷ್ಠ ಎರಡು ಭಾಷೆಯನ್ನಾದರೂ ನಾವು ಕಲಿತಿರಬೇಕು. ಆಗ ಮತ್ತೊಂದು ಭಾಷೆಯಲ್ಲಿ ಇರುವ ಅವರ ಆಚರಣೆ, ಮನೋಧರ್ಮ, ಅವರ ವಿಚಾರ ವೈಚಾರಿಕತೆ ತಿಳಿಯಲು ಸಾದ್ಯವಾಗುತ್ತದೆ ಎಂದರು.

ಕಥೆಯನ್ನು ಬರೆಯುವವರೆಗೆ ಕಥೆಗಾರನ ಅಭಿಪ್ರಾಯ, ಕಥೆ ಬರೆದ ನಂತರ ಅದು ಓದುಗರ ಅವರರವರ ಅಭಿಪ್ರಾಯ ಅಗಿರುತ್ತದೆ ಎಂದು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಮುಖ್ಯ ಅತಿಥಿಗಳಾಗಿ ಪ್ರೋಫೆಸರ್ ನಾಗ್ಯಾನಾಯ್ಕ್, ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು, ಸ್ನಾತಕೋತ್ತರ ಇಂಗ್ಲಿಷ್ ಮತ್ತು ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ,ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲೆಯಾದ ಡಾ.ಎಮ್.ಕೆ.ವೀಣಾ ಉಪಸ್ಥಿತರಿದ್ದರು.
ವಿಚಾರ ಸಂಕಿರಣದ‌ ಅಧ್ಯಕ್ಷತೆಯನ್ನು ಡಾ. ಕೆ.ಬಿ. ಧನಂಜಯ, ಪ್ರಾಚಾರ್ಯರು, ಸಹ್ಯಾದ್ರಿ ಕಲಾ ಕಾಲೇಜು ಇವರು ವಹಿಸಿದ್ದರು.

ಪ್ರೊ. ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಭಾಷಾಶಾಸ್ತ್ರ ವಿಭಾಗ ಇವರು ಸಂಪನ್ಮೂಲ ವ್ಯಕ್ತಿಯಾಗಿ ಪ್ರಾಸ್ಥಾವಿಕ ಭಾಷಣ ಮಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಹಚ್.ಎಸ್. ನಾಗಭೂಷಣ್ ಪ್ರಾಚಾರ್ಯರು, ಕಮಲ ನೆಹರೂ ಮಹಿಳಾ ಕಾಲೇಜು, ಶಿವಮೊಗ್ ಡಾ.ಪಿ.ಪಿ.ಗಿರಿಧರ್, ಪ್ರಾಧ್ಯಾಪಕರು CIIL ಮೈಸೂರು,ಇವರುಗಳು ಆಗಮಿಸಿದ್ದರು.ಪ್ರಮುಖ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಎಂ.ದತ್ತಾತ್ರೇಯ, ಸಹ ಪ್ರಾಧ್ಯಾಪಕರು, ಸ್ನಾತಕೋತ್ತರ ಇಂಗ್ಲೀಷ್ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಇವರು ವಹಿಸಿದ್ದರು.
ತೃತೀಯ ಬಿ.ಎ.ವಿದ್ಯಾರ್ಥಿಗಳಾದ ಬೆನಕೇಶ್, ರವಿ ಪೂಜಾರ ವಿಷಯ ಮಂಡನೆ ಮಾಡಿದರು.
ಪ್ರಾಧ್ಯಾಪಕರು ಮತ್ತು ಸಂಯೋಜಕರು, ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಪ್ರೊಫೆಸರ್ ಟಿ.ಅವಿನಾಶ್ ಎಲ್ಲರನ್ನು ಸ್ವಾಗತಿಸಿದರು.ಸಚಿನ್ ಜಿ ಹಿಲ್ಲೋಡಿ ಉಪನ್ಯಾಸಕರು, ಸ್ನಾತಕೋತ್ತರ ಇಂಗ್ಲಿಷ್ ಇವರು ವಂದನಾರ್ಪಣೆ ಮಾಡಿದರು.ಇಂಗ್ಲಿಷ್ ವಿಭಾಗದ ಉಪನ್ಯಾಸಕರಾಗದ ಶೃಂಗಶ್ರೀ ಕಾರ್ಯಕ್ರಮದ ನಿರೂಪಣೆ ಮಾಡಿದರು.

ವರದಿ ಮಂಜುನಾಥ್ ಶೆಟ್ಟಿ…