ಶಿವಮೊಗ್ಗ ನಗರದ ಕೈಗಾರಿಕ ಕ್ಷೇತ್ರದಿಂದ ವಿಶ್ವ ಭೂಪಟದಲ್ಲಿ ಶಿವಮೊಗ್ಗ ನಗರವು ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ನಗರದ ಕೈಗಾರಿಕೋದ್ಯಮಿಗಳು ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಕೊಡಮಾಡಿದ ‘ವಕೇಶನಲ್ ಅವಾರ್ಡ’ ಪ್ರಶಸ್ತಿ ಸ್ವೀಕರಿಸಿದ ಮಲ್ನಾಡ್ ಫೌಂಡ್ರಿ ಮಾಲಿಕರಾದ ಶ್ರೀಯುತ ಮಧುಕರ್ ಜೋಯಿಸ್ ಮಾತನಾಡಿದರು.

ಕೈಗಾರಿಕೋದ್ಯಮಿಗಳ ಪಾಲುದಾರ ‘ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ’ ಪ್ರಾರಂಭದಲ್ಲಿ ಬಂಡವಾಳ ಹೂಡಲು ಅಂದು ಸಹಕರಿಸಿದ್ದರಿಂದ ಯಶಸ್ಸು ಒದಗಿ ಬಂತು. ಆದರೆ ಕಾರ್ಯ ನಿರ್ವಹಿಸುವ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಂತ್ರೋಪಕರಣಗಳ ಬಿಡಿಭಾಗಗಳನ್ನು ತಯಾರಿಸುವಲ್ಲಿ ನಮ್ಮ ಕಾರ್ಮಿಕರು ಸಿದ್ದ ಹಸ್ತರು ಇವು ಹಲವಾರು ದೇಶಗಳಿಗೆ ರಪ್ತು ಆಗುತ್ತದೆ. ಅವರ ಶ್ರಮದಿಂದ ನಮ್ಮ ನಗರಕ್ಕೆ ಹೆಸರು ಬಂದಿದೆ. ಇಂದು ನನಗೆ ಸಂದಿರುವ ಗೌರವ ಎಲ್ಲ ಶ್ರಮಜೀವಿಗಳಿಗೆ ಸಲ್ಲಿಸುತ್ತೇನೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರೊ.ವಿ.ಜಿ.ಲಕ್ಷ್ಮೀನಾರಾಯಣ್ ರವರು ರೋಟರಿ ಸಂಸ್ಥೆ ವತಿಯಿಂದ ಈ ಮಾಸದಲ್ಲಿ ವಿಶ್ವಾದ್ಯಾಂತ ಸಾದಕರನ್ನು ಗೌರವಿಸುವುದು ಸಂಪ್ರದಾಯ, ನಮ್ಮ ಸಂಸ್ಥೆಯಿಂದ ಇಂದು ನೇರವಾಗಿ ಸಾವಿರಾರು ಕುಟುಂಬಗಳಿಗೆ ಜೀವನ ಕಲ್ಪಿಸಿದರೆ, ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಕೆಲಸ ಒದಗಿಸಿದ್ದಾರೆ. ಆದ್ದರಿಂದ ಈ ಸಂಸ್ಥೆಯನ್ನು ಗುರುತಿಸಿ ಗೌರವಿಸಿದ್ದೇವೆ ಎಂದರು.

ಅಧ್ಯಕ್ಷರಾದ ರೊ. ಎಸ್.ಆರ್.ಲಕ್ಷ್ಮೀನಾರಾಯಣ್ ಮಾತನಾಡುತ್ತಾ ನಲವತ್ತು ವರ್ಷಗಳ ಪರಿಚಯ, ಇವರ ಬೆಳವಣಿಗೆಯನ್ನು ಹತ್ತಿರದಿಂದ ಬಲ್ಲೆ, ಇವರ ಏಕಾಗ್ರತೆ ಕಾರ್ಯದಿಂದ ಈ ಮಟ್ಟದ ಬೆಳವಣಿಗೆ ಕಾಣಲು ಸಾದ್ಯವಾಗಿದೆ. ಇಂತವರನ್ನು ಗೌರವಿಸಲು ನಮಗೆ ಹೆಮ್ಮೆ ಎನಿಸುತ್ತದೆ ಎಂದರು.
ರೊ.ಭಾರದ್ವಾಜ್ ಸ್ವಾಗತಿಸಿದರು. ರೊ.ಉಮೇಶ್ ಎಲ್ಲರಿಗೂ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…