ಶಿವಮೊಗ್ಗ: ಆಧುನೀಕರಣದಿಂದ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ನಿರಂತರವಾಗಿ ಪರಿಸರ ನಾಶವಾಗುತ್ತಿದೆ ಎಂದು ಪರಿಸರವಾದಿ, ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಎಂ.ಕುಮಾರಸ್ವಾಮಿ ವಿಷಾಧ ವ್ಯಕ್ತಪಡಿಸಿದರು.
ಶಿವಮೊಗ್ಗ ತಾಲೂಕಿನ ಬೀರನಕೆರೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಶಾಖೆ ಹಾಗೂ ಜಿಲ್ಲಾ ಶಾಖೆ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಕರ್ನಾಟಕ ದರ್ಶನ ಕಾರ್ಯಕ್ರಮದಲ್ಲಿ ಜಾಗತಿಕ ತಾಪಮಾನದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಹವಮಾನ ವೈಪರೀತ್ಯ ತಪ್ಪಿಸಲು ಮಾನವನ ಜೀವನಶೈಲಿ ಬದಲಾಯಿಸಿಕೊಳ್ಳಬೇಕು. ಅತಿಯಾದ ವಾಹನ ಬಳಕೆ ಹಾಗೂ ಕೈಗಾರಿಕಾ ಕ್ರಾಂತಿ ಮತ್ತು ವಿವಿಧ ಪರಿಣಾಮಗಳಿಂದ ಪ್ರಕೃತಿಗೆ ಹಾನಿಯಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಆದ್ದರಿಂದ ಮಳೆ ಅವಧಿಯು ವ್ಯತ್ಯಾಸ ಆಗುತ್ತಿದೆ. ಯಾವ ಕಾಲದಲ್ಲಿಯಾದರೂ ಮಳೆ ಬರಬಹುದಾಗಿದೆ. ಪ್ರಕೃತಿಯಲ್ಲಿ ಏನು ಬೇಕಾದರೂ ಸಂಭವಿಸಬಹುದಾಗಿದೆ ಎಂದು ತಿಳಿಸಿದರು.
ಭಾರತ ದೇಶವು ಮಾಲಿನ್ಯದಲ್ಲಿ ಮೂರನೇ ಸ್ಥಾನದಲ್ಲಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ಅತಿ ಹೆಚ್ಚಯ ಕಲ್ಲಿದ್ದಲಿ, ವಿದ್ಯುಚ್ಚಕ್ತಿ ಬಳಕೆಯಿಂದ ಪರಿಸರ ವಿನಾಶದ ಅಂಚಿನಲ್ಲಿದೆ. ಇದೇ ರೀತಿ ಆದರೆ ಹವಮಾನ ತಜ್ಞರು ಹೇಳುವ ಪ್ರಕಾರ 40ರಿಂದ 50 ವರ್ಷಗಳಲ್ಲಿ ಇಡೀ ಜೀವ ವ್ಯವಸ್ಥೆ ಹಾಳಾಗಲಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಜಾಗತಿಕ ತಾಪಮಾನದಿಂದ ಅಕಾಲಿಕ ಮಳೆ, ಭೂಕುಸಿತ, ಪ್ರವಾಹ ಹಾಗೂ ಭೂಕಂಪನಗಳು ಸಂಭವಿಸುವುದರಿAದ, ಜಾಗತಿಕ ತಾಪಮಾನದ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರು ಇದರ ಬಗ್ಗೆ ಜಾಗೃತಿ ವಹಿಸಬೇಕು. ಮಾಹಿತಿ ತಿಳಿದುಕೊಳ್ಳುವ ಮೂಲಕ ಎಚ್ಚರಿಕೆ ವಹಿಸಬೇಕಾದುದು ಅತ್ಯಂತ ಮುಖ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತಿç ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಪರಿಸರ ಹಾಗೂ ಪ್ರಕೃತಿಯ ಮಹತ್ವ ಅರಿವಾಗುತ್ತದೆ. ಪರಿಸರದ ಬಗ್ಗೆ ಆಸಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೆ.ಪಿ.ಬಿಂದಕುಮಾರ್, ಎಚ್.ಪರಮೇಶ್ವರ್, ಚೂಡಾಮಣಿ ಪವಾರ್, ಕಾತ್ಯಾಯಿನಿ, ಭಾರತಿ, ರಾಜೇಶ್ ಅವಲಕ್ಕಿ, ಜಿ.ವಿಜಯ್‌ಕುಮಾರ್, ಡಾ. ಶ್ರೀಪತಿ, ಮಲ್ಲಿಕಾರ್ಜುನ್, ಎಚ್.ಶಿವಶಂಕರ್, ಪರಮೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…