03/03/2022 ಗುರುವಾರ ಸಂಜೆ ಶಿವಮೊಗ್ಗ ನಗರದ ಸಂಗೋಳ್ಳಿ ರಾಯಣ್ಣ ಸರ್ಕಲ್ ಬಳಿಯ ಶ್ರೀ ಮುಡಗೋಡ್ ಹಿರಣ್ಯ ನಿಲಯದಲ್ಲಿ, ಏನಾದರೂ ಸರಿಯೇ ಮೊದಲು ಮಾನವನಾಗು ಎಂದು ವಿದ್ಯೆ ನೀಡಿ ನಾನಾ ವೃತ್ತಿಯಲ್ಲಿ ಇದ್ದರು ಗೌರವದೊಂದಿಗೆ ಬದುಕು ರೂಪಿಸಿಕೊಳ್ಳಲು ವೃತಿಯಿಂದ ತುತ್ತು ಅನ್ನಕ್ಕೆ ದಾರಿ ದೀಪವಾದ ಗುರುಗಳಿಗೆ ಶಿಷ್ಯರಿಂದ ಗೌರವ ಸಮರ್ಪಣೆಯೊಂದಿಗೆ ಸನ್ಮಾನ್ಯ ಮಾಡಲಾಯಿತು.
ಸರ್ಕಾರಿ ಕನ್ನಡ ಮತ್ತು ಆಂಗ್ಲ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಗೆ (ಮೈನ್ ಮಿಡ್ಲ್ ಸ್ಕೂಲ್) 1980ರ ಸಾಲಿನಲ್ಲಿ ಚಿತ್ರಕಲೆ ಶಿಕ್ಷಕರಾಗಿ ಶಾಲೆಯಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಚಿತ್ರಕಲೆಯಿಂದಲೇ ತಮ್ಮ ಬದುಕು ರೂಪಿಸಿಕೊಳ್ಳಲು ದಾರಿದೀಪವಾದ ಶ್ರೀ ಮೋಹನ್ ಚಿತ್ರಕಲಾ ಶಿಕ್ಷಕರಿಗೆ ಮತ್ತು ಅವರ ಧರ್ಮ ಪತ್ನಿಯಾದ ಶ್ರೀ ಮತಿ ಸುರೇಖಾ ರವರಿಗೆ, ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಸನ್ಮಾನ್ಯ ದೊಂದಿಗೆ ಗೌರವ ಸಮರ್ಪಣೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ನಾಲ್ಕು ವರ್ಷಗಳ ಹಿಂದೆಯೇ ಶ್ರೀ ಯುತ ಪರಶುರಾಮ ರವರು, ತಮ್ಮ ವೃತ್ತಿಯಲ್ಲಿ ಟ್ರಾಕ್ಸ್ ಡೈವರ್ ರಾಗಿದ್ದು, ಒಬ್ಬರ ಮನೆಯ ಸಾಮಗ್ರಿಗಳನ್ನು ಕೊಟ್ಟು ಬರುವ ವೇಳೆ ಪಕ್ಕದ ಮನೆಯಲ್ಲಿ ನಿಂತ್ತಿದ್ದ ತಮಗೆ ಶಿಕ್ಷಣ ನೀಡಿದ ಶಿಕ್ಷಕಿಯ ನೋಡಿ ಭಾವುಕರಾಗಿ ಪಾದ ಸ್ಪರ್ಶವ ಮಾಡಿ ಆಶಿರ್ವಾದ ಪಡೆದರು, ಈ ಆಶಿರ್ವಾದ ನಾನೋಬ್ಬನೇ ಪಡೆದರೆ ಸಾಲದು ನನ್ನ ಜೋತೆ ಓದಿದ ಸ್ನೇಹಿತರು, ಗುರುಗಳ ಆಶೀರ್ವಾದ ಪಡೆಯಬೇಕು ಎಂದು ಸಂಕಲ್ಪದೊಂದಿಗೆ ತನ್ನ ಹಳೇ ಮಿತ್ರರ ಹುಡುಕಿ ಅದರ ಜೋತೆ ವಿದ್ಯೆ ನೀಡಿದ ಶಿಕ್ಷಕರನ್ನು ಹುಡುಕಿ ಗೌರವ ಸಮರ್ಪಣೆಯೊಂದಿಗೆ ಸನ್ಮಾನ್ಯ ಮಾಡಿ ಆಶಿರ್ವಾದ ಪಡೆದಿರುವರು, ಆದರೆ ಎರಡು ವರ್ಷಗಳ ಕಾಲ ಕೊರೋನಾ, ಒಂದು ವರ್ಷ ಓಮಿಕ್ರಾನ್, ಈಗ ನಗರದಲ್ಲಿ ನಡೆದ ಅಹಿತಕರ ಘಟನೆಗಳಿಂದ ನೆನೆಗುದಿಗೆ ಬಿದ್ದಿದ್ದ ಸನ್ಮಾನದೊಂದಿಗೆ ಆರ್ಶಿವಾದ ಪಡೆಯುವ ಕಾರ್ಯಕ್ಕೆ ಇಂದು ಕಾಲ ಕೂಡಿ ಬಂದಿದೆ, ಗುರುಗಳ ಆಶೀರ್ವಾದ ಪಡೆಯಲು ಅವಕಾಶ ಮಾಡಿಕೊಟ್ಟ ಪರಶುರಾಮ ರವರಿಗೆ ಎಲ್ಲಾ ಹಳೇ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು ಹೇಳಿದರು.
ಈ ಸಂದರ್ಭದಲ್ಲಿ ಎಂಬತೈದರ ಹರಿಯ ನಿವೃತ್ತ ಚಿತ್ರಕಲಾ ಶಿಕ್ಷಕರಾದ ಶ್ರೀ ಮೋಹನ್ ರವರು, ಭಾವುಕರಾಗಿ ಕಣ್ಣಲ್ಲಿ ನೀರಿನ ಹನಿಯೊಂದಿಗೆ, ನನ್ನ ಜೀವ ಸಾರ್ಥಕವಾಯಿತು, ಮಕ್ಕಳು, ಮೊಮ್ಮಕ್ಕಳು ಪಡೆದ ತಾವುಗಳು ಶಿಕ್ಷಕರ ಆಶಿರ್ವಾದ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ, ಶ್ರೀ ಪರಶುರಾಮ, ಶ್ರೀ ಯತೀಶ್ ರಾಜ್, ಶ್ರೀ ಶಂಕರ್ ವೈ.ಬಿ. ಶ್ರೀ ಶಿವಮೊಗ್ಗ ಶಂಕರ್, ಶ್ರೀ ಸುರೇಶ್ ಕೆ. ಶ್ರೀ ವಿಶ್ವನಾಥ, ಶ್ರೀ ಪರಮೇಶ್ವರ, ಶ್ರೀ ಚಂದ್ರಕಾಂತ, ಶ್ರೀ ಬಸವರಾಜ, ಶ್ರೀ ಫಿರೋದಷಾ, ಶ್ರೀ ಮತಿ ಸವಿತಾ , ಶ್ರೀ ಮತಿ ಸುನೀತಾ ಹಾಗೂ ಇತರರೂ ಮತ್ತು ಶಿಕ್ಷಕರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.