ಇಂದು ನಗರದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾಕ್ಟರ್ ಸುಧಾಕರ್ ಭೇಟಿ ನೀಡಿದರು. ಸಚಿವರು ಈ ಸಮಯದಲ್ಲಿ ಸಂಸ್ಥೆಯ ಸಮಗ್ರ ಮಾಹಿತಿ ಪಡೆದರು. ಪ್ರಮುಖವಾಗಿ 2ಅಂಶಗಳನ್ನು ಪ್ರಸ್ತಾಪಿಸಿದರು ಮೊದಲನೆಯದಾಗಿ ಎಲ್ಲಾ ಐಸಿಯು ವಾರ್ಡ್ ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಹಾಗೂ ಬಹುಮುಖ್ಯವಾಗಿ ಜಿಯೋ ಫೆನ್ಸಿಂಗ್ ಬಗ್ಗೆ ತಿಳಿಸಿದರು.


ಏನಿದು ಜಿಯೋ ಫೆನ್ಸಿಂಗ್ ?
ಪ್ರಮುಖವಾಗಿ ವೈದ್ಯರು ಬಯೋಮೆಟ್ರಿಕ್ಸ್ ಫೆಸಿಲಿಟಿ ಇದ್ದರೂ ಕೂಡ ಸಂಸ್ಥೆಗಳಲ್ಲಿ ಕೆಲಸ ಮಾಡದೆ ಹೊರಗಡೆ ಕ್ಲಿನಿಕ್ ಹಾಗೂ ಹಾಸ್ಪಿಟಲ್ ಗಳಿಗೆ ಕನ್ಸಲ್ಟಿಂಗ್ ಡಾಕ್ಟರ್ ಆಗಿ ಹೋಗುವುದನ್ನು ತಡೆಯಲು ಈ ಜಿಯೋ ಫೆನ್ಸಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ಆಸ್ಪತ್ರೆಯ ಕಟ್ಟಡಗಳು ಚೆನ್ನಾಗಿದ್ದರೂ ಸಹ ನಿರ್ವಹಣೆ ಸರಿಯಿಲ್ಲ ಎಂದು ಸೂಪರ್ಡೆಂಟ್ ಶ್ರೀಧರ್ ಅವರ ಮೇಲೆ ಕೋಪಗೊಂಡರು. ಐಸಿಯು ಡೆತ್ ರೇಟ್ 54.7% ಇರುವುದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು . ಶಿವಮೊಗ್ಗದ ಕೋವಿಡ ಡೆತ್ ಆಡಿಟ್ ಗಾಗಿ ಕಮಿಟಿವೊಂದನ್ನು ಕಳಿಸುವುದಾಗಿ ಹೇಳಿದರು. ಈ ದಿನದ ಸಭೆಯಲ್ಲಿ SIMS ನಿರ್ದೇಶಕರಾದ ಸಿದ್ದಪ್ಪ , ಸೂಪರ್ ಡೆಂಟ್ ಶ್ರೀಧರ್ , DHO ರಾಜೇಶ್ ಸುರ್ಗಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153