ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸಕೊಪ್ಪ ಗ್ರಾಮದ ವಾಸಿಯೊಬ್ಬರ ಟಾಟಾ ಕಂಪನಿಯ ನೋಂದಣಿ ಸಂಖ್ಯೆ ಕೆಎ16ಬಿ5442 ಲಾರಿಯನ್ನು ದಿಃ-03-03-2022ರಂದು ರಾತ್ರಿ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0105/2022 ಕಲಂ 379ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.

ಪಿಐ ಸಾಗರ ಗ್ರಾಮಾಂತರ ಮತ್ತು ಸಿಬ್ಬಂಧಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ಪ್ರಕರಣದ ಆರೋಪಿ ಕರಿಬಸಪ್ಪ ಬಿ.ಕೆ @ ಕರಿಯ, 32 ವರ್ಷ ವಾಸ ನ್ಯಾಮತಿ ದಾವಣಗೆರೆ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಅಂದಾಜು ಮೌಲ್ಯ 7,50,000/- ರೂ ಗಳ ಟಾಟಾ ಕಂಪನಿಯ ಲಾರಿಯನ್ನು ವಶಪಡಿಸಿಕೊಂಡಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…