ರಾಜ್ಯ ಸರ್ಕಾರದ ಮಹತ್ತರ ನಿರ್ಧಾರ ವೊಂದರಲ್ಲಿ, ಕೇಂದ್ರ ಸರಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ತೀರ್ಥಹಳ್ಳಿ ತಾಲೂಕಿನ ಮುಳಬಾಗಿಲು ಹಾಗೂ ಇನ್ನಿತರ 1616 ಜನವಸತಿ ಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯ 274 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ, ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
DBOT ಆಧಾರದ ಮೇಲೆ ಅನುಷ್ಠಾನಕ್ಕೆ ಬರುವ ಈ ಬಹುಗ್ರಾಮ ಕುಡಿಯುವ ಯೋಜನೆಯನ್ನು ಕಾಲಮಿತಿ ಯೊಳಗೆ ಕಾರ್ಯಗತ ಗೊಳಿಸಲಾಗುವುದು.
ಕೇಂದ್ರ ಸರಕಾರವು, 2020-21ನೆಯ ಸಾಲಿಗೆ, ಜಲ ಜೀವನ್ ಮಿಷನ್ ಅಡಿ ಮಂಜೂರಾತಿ ಆದ ರೂಪಾಯಿ 8196.95 ಮೊತ್ತದ ರಾಜ್ಯ ಸರಕಾರದ ಕ್ರಿಯಾ ಯೋಜನೆಯಡಿ, ಈ ಪ್ರಸ್ತಾವಿತ ಯೋಜನೆಯನ್ನು ಕೈಗೆತ್ತಿ ಕೊಳ್ಳಲಾಗುವುದು.
ಈ ಪ್ರಸ್ತಾವನೆಗೆ, ಈಗಾಗಲೇ ರಾಜ್ಯ ಮಟ್ಟದ ಯೋಜನಾ ಸಮಿತಿಯ ಅನುಮತಿ ಪಡೆಯಲಾಗಿದೆ.
ಪ್ರಸ್ತಾವಿತ ಕುಡಿಯುವ ನೀರಿನ ಯೋಜನೆ ಕಾರ್ಯಗತ ವಾಗುವುದರಿಂದ ಸರಿ ಸುಮಾರು ಒಂದು ಲಕ್ಷ ಮೂವತ್ತು ಸಾವಿರ ಪ್ರಕ್ಷೇಪಿತ ಜನಸಂಖ್ಯೆಗೆ ಶುದ್ಧ ಹಾಗೂ ಶಾಶ್ವತ ಕುಡಿಯುವ ನೀರಿನ ಲಭ್ಯತೆಯನ್ನು ಪಡೆಯ ಲಾಗುವುದು.
ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಪ್ರಸ್ತಾವಿತ ಕುಡಿಯುವ ನೀರಿನ ಯೋಜನಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ, ಧನ್ಯವಾದ ತಿಳಿಸಿದ್ದಾರೆ.