ಬೆಂಗಳೂರು ಮಾರ್ಚ್‌ 13: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಆಯೋಗದ ವರದಿಯಂತೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ 7.5 ಕ್ಕೆ ಏರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಾಗಬೇಕು ಎಂದು ಸಮಾಜ ಸೇವಕ ಎಸ್‌ ಆರ್‌ ನವಲಿ ಹಿರೇಮಠ್‌ ಆಗ್ರಹಿಸಿದರು.

ಇಂದು ನಗರದ ಫ್ರೀಡಂ ಪಾರ್ಕಿನಲ್ಲಿ ಕಳೆದ 32 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಜನಸಂಖ್ಯೆ ಹೆಚ್ಚಾದಂತೆ ಮೀಸಲಾತಿಯ ಪ್ರಮಾಣವೂ ಹೆಚ್ಚಾಗಬೇಕು. ಆದರೆ, ರಾಜ್ಯ ಸರಕಾರ ಎಸ್‌.ಟಿ ಪಟ್ಟಿಗೆ ಹಲವಾರು ಜಾತಿಗಳನ್ನು ಸೇರ್ಪಡೆಗೊಳಿಸಿದೆ. ಆದರೆ, ಸೇರ್ಪಡೆಗೊಳಿಸಿದ ರೀತಿಯಲ್ಲೇ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕಾಗಿತ್ತು. ಆದರೆ, ಅದನ್ನು ಮಾಡದಂತಹ ಸರಕಾರ ಎಸ್‌.ಟಿ ಮೀಸಲಾತಿಯನ್ನು ಒತ್ತಡವನ್ನು ಹೆಚ್ಚಿಸಿದೆ.

ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ವಾಲ್ಮೀಕಿ ರಾಜನಹಳ್ಳಿ ಪೀಠದ ಶ್ರೀ ಪ್ರಸನನ್ನಾಂದ ಮಹಾಸ್ವಾಮಿಗಳವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಪ್ರಮುಖ ಬೇಡಿಕೆಯಾದಂತಹ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ವರದಿ ಹರೀಶ ಶೆಟ್ಟಿ ಬೆಂಗಳೂರು…