ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಸ್ವತಃ ಹೆಚ್ಐವಿ ಭಾದಿತೆಯಾಗಿದ್ದರೂ ಎದೆಗುಂದದೆ ಹಲವಾರು ವರ್ಷಗಳಿಂದ ಸಮಾಜದ ಎಚ್ಐವಿ ಪೀಡಿತರಿಗೆ ಆತ್ಮಬಲವನ್ನು ತುಂಬುತ್ತಿರುವ ಅಭಯಧಾಮ ಕೇಂದ್ರದ ಶ್ರೀಮತಿ ಜಯಲಕ್ಷ್ಮಿ ರವರನ್ನು ಗೌರವಿಸಲಾಯಿತು.
ಶಿವಮೊಗ್ಗ ನಗರ ಮಹಿಳಾ ಮೋರ್ಛಾ ಅಧ್ಯಕ್ಷೆಯಾದ ಶ್ರೀಮತಿ ಸುರೇಖ ಮುರಳೀಧರ್ ರವರು, ದುರ್ಗಿಗುಡಿಯಲ್ಲಿರುವ ಅಭಯಧಾಮ ಸಂಸ್ಥೆಯು,2006-07 ರಿಂದ HIV ಸೊಂಕಿತರಿಗೆ ಬೆಂಬಲವಾಗಿ ಕೆಲಸ ನಿರ್ವಹಿಸುತ್ತಿದೆ. HIV ಸೊಂಕಿಗೆ ಒಳಗಾಗಿರುವ ವ್ಯಕ್ತಿಗಳಿಗೆ ART ಚಿಕಿತ್ಸೆ ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಯ ಅತ್ಯಂತ ಪುಣ್ಯದ ಹಾಗೂ ಶ್ಲಾಘನಿಯ ಕಾರ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಛಾ ಜಿಲ್ಲಾಧ್ಯಕ್ಷೆ ಶ್ರೀಮತಿ ವಿದ್ಯಾ ಲಕ್ಷ್ಮೀಪತಿ, ಜಿಲ್ಲಾ ಕಾರ್ಯದರ್ಶಿಯಾದ ಸುಮಾ ಭೂಪಾಳಂ, ಮಾಧ್ಯಮ ಪ್ರಮುಖರಾದ ಉಷಾ, ನಗರ ಪ್ರಧಾನ ಶ್ರೀಮತಿ ರಶ್ಮಿ ಶ್ರೀನಿವಾಸ್, ಆರತಿ ಪ್ರಕಾಶ್, ರಾಧಾ ಗುರುದತ್ತ್, ಸುಧಾಮಣಿ, ಅನಿಲ, ಯಶೋಧ, ಸುನೀತಾ ಮೋಹನ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಲಕ್ಷ್ಮಿ ಶ್ರೀ ಗಿರೀಶ್ ನಾಯಕ್ ಉಪಸ್ಥಿತರಿದ್ದರು.