ಕನ್ನಡಿಗರ ಮನೆ ಮಗ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಜೆಸಿ ಶಿವಮೊಗ್ಗ ಶರಾವತಿ ಸಂಸ್ಥೆಯವರು ನಗರದಲ್ಲಿ ಅದ್ದೂರಿ ಅಪ್ಪು ಫೆಸ್ಟ್ ಹೆಸರಿನಲ್ಲಿ ಗಿಡ ನೆಡುವ ಮೂಲಕ, ಸಂಘದ ಮೂಲಕ, ಪರಿಸರ ಜಾಗೃತಿ ಕಾರ್ಯಕ್ರಮ ಜರುಗಿತು, ಉಚಿತವಾಗಿ ಮಧುಮೇಹ ಪರೀಕ್ಷೆ ಮತ್ತು ನೇತ್ರದಾನ ಶಿಬಿರ ಮೂಲಕ ಆರೋಗ್ಯದ ಬಗ್ಗೆ ನೇತ್ರದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ನೆರವೇರಿತ್ತು.
ಬೆಳಗ್ಗೆ ಏಳು ಗಂಟೆಗೆ ನಗರದ ರಂಗನಾಥ ಬಡಾವಣೆಯ ಪುನೀತ್ ರಾಜಕುಮಾರ್ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಪ್ರಾರಂಭವಾದ ಕಾರ್ಯಕ್ರಮ, ಉದ್ಯಾನವನದಿಂದ ಪುನೀತ್ ರಾಜಕುಮಾರ್ ರಸ್ತೆಯವರೆಗೂ ಸೈಕಲ್ ಜಾಥಾ ಯಶಸ್ವಿಯಾಗಿ ಚಿರಂಜೀವಿ ಬಾಬು ಅವರ ನೇತೃತ್ವದಲ್ಲಿ ಸೌಮ್ಯ ಅರಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೈಕಲ್ ಜಾಥಾದ ಮೂಲಕ ಪರಿಸರದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಂತರ ನಾಗದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಐ ಬ್ಯಾಂಕಿನ ಸಹಯೋಗದೊಂದಿಗೆ ನೇತ್ರದಾನ ಶಿಬಿರ ಜ್ಯೋತಿ ಅರಳಪ್ಪ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು, ಸುಮಾರು 250ಕ್ಕೂ ಹೆಚ್ಚು ಜನ ನೇತ್ರದಾನಕ್ಕೆ ಒಪ್ಪಿಗೆ ಪತ್ರ ನೀಡಿದ್ದಾರೆ.
ಕರಿಯಣ್ಣ ಬಿಲ್ಡಿಂಗ್ ವಿನೋಬನಗರ ತಲಾರಿ ಲ್ಯಾಬ್ ನಲ್ಲಿ ಮೋಹನ್ ಕಲ್ಪತರು ಅವರ ನೇತೃತ್ವದಲ್ಲಿ ಉಚಿತ ಮಧುಮೇಹ ಪರೀಕ್ಷಾ ಶಿಬಿರ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಘಟಕದ ಉಪಾಧ್ಯಕ್ಷರುಗಳು ಕೋ ಆರ್ಡಿನೇಟರ್ ಗಳು, ಜೆಸಿಐ ಶಿವಮೊಗ್ಗ ಶರಾವತಿ ಯ ಪದಾಧಿಕಾರಿಗಳು ಸದಸ್ಯರುಗಳು ಭಾಗವಹಿಸಿದ್ದರು.
ಪುನೀತ್ ರಾಜಕುಮಾರ್ ಪಾರ್ಕ್ ನಲ್ಲಿ ಗಿಡ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು, ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಜೆಸಿ ಸ್ಮಿತಾ ಮೋಹನ್ ಅವರು ನಿರ್ವಹಿಸಿದರು. ಸೈಕಲ್ ಜಾತದ ಮೂಲಕ ಪರಿಸರದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಸಂಗೀತ್ ಕುಮಾರ್ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು. ತಲಾರಿ ಲ್ಯಾಬ್ ನಲ್ಲಿ ಮಧುಮೇಹ ಶಿಬಿರ ಕಾರ್ಯಕ್ರಮದ ಜವಾಬ್ದಾರಿಯನ್ನು ನವೀನ್ ತಲಾರಿ ನಿರ್ವಹಿಸಿದರು.
ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಮಧ್ಯಾಹ್ನದವರೆಗೂ ನಡೆದ ಅಪ್ಪು ಫೆಸ್ಟ್ ನಾ ಮುಖ್ಯ ಕಾರ್ಯಕ್ರಮಗಳು,
ಜೆಸಿಐ ಶಿವಮೊಗ್ಗ ಶರಾವತಿಯ ಜೆಸಿ ಗಾರ ಶ್ರೀನಿವಾಸ್ ಅವರು ಅಪ್ಪು ಫೆಸ್ಟ್ ಈ ಅದ್ದೂರಿ ಕಾರ್ಯಕ್ರಮಗಳ ಮಾರ್ಗದರ್ಶಕರಾಗಿದ್ದರು.
ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಜೆಸಿ ಶಿವಮೊಗ್ಗ ಶರಾವತಿ ಘಟಕದಿಂದ ನಡೆದ ಅಪ್ಪು ಫೇಸ್ಬುಕ್ ಅದ್ದೂರಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪದಾಧಿಕಾರಿಗಳು ಸದಸ್ಯರು ನಗರದ ನಾಗರಿಕರಿಗೆ ಮುಖ್ಯವಾಗಿ ಅಪ್ಪು ಅಭಿಮಾನಿಗಳಿಗೆ ಅಧ್ಯಕ್ಷರದ ಜೆಸಿ ಸೌಮ್ಯ ಅರಾಳಪ್ಪ , ಕಾರ್ಯದರ್ಶಿಗಳದ ಜೆಸಿ ಮಮತ ಶಿವಣ್ಣ , ಜೆಸಿ ಐಪಿಪಿ ಮೋಹನ್ ಕಲ್ಪತರು, ಜೆಸಿ ಪಿಪಿ ಗಾರ ಶ್ರೀನಿವಾಸ್, ಮತ್ತು ಜೆಸಿ ಜ್ಯೋತಿ ಅರಳಪ್ಪ ಪಾಸ್ಟ್ ಜೋನ್ ಆಫೀಸರ್ ಎಲ್ಲರೂ ಧನ್ಯವಾದಗಳನ್ನು ತಿಳಿಸಿರುತ್ತಾರೆ.