ಶಿವಮೊಗ್ಗ : ಕರುನಾಡು ರಾಜ್ಯ ವನ್ನಿಯಕುಲ ಕ್ಷತ್ರೀಯ ಮಹಾಸಭಾದ ರಾಜ್ಯ ಸಂಘದ ವತಿಯಿಂದ ಶುಕ್ರವಾರ ಎಂ ಆರ್ ಎಸ್ ಸರ್ಕಲ್ ನ ಇಂಜಿನಿಯರ್ ಸಭಾಂಗಣದಲ್ಲಿ ವನ್ನಿಕುಲ ಕ್ಷತ್ರೀಯ ಸಮುದಾಯದ ಮೂಲಪುರುಷ ಶ್ರೀ ವೀರರುದ್ರ ವನ್ನಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ಕೆ ನಂದಕುಮಾರ್ ಗೌಂಡರ್ ಮಾತನಾಡಿ ಇಲ್ಲಿಯವರೆಗೂ ನಮ್ಮ ಸಮುದಾಯದವರು ಜಯಂತಿ ಆಚರಣೆಯನ್ನು ಮಾಡುತ್ತಿರಲಿಲ್ಲ ಆದರೆ ಕರುನಾಡು ರಾಜ್ಯ ವನ್ನಿಯಕುಲ ಕ್ಷತ್ರೀಯ ಮಹಾಸಭಾ ಉದಯದ ನಂತರ ಈ ಆಚರಣೆಯನ್ನು ಕಳೆದ ವರ್ಷದಿಂದ ಆರಂಭಿಸಿದ್ದು ಮುಂದಿನ ದಿನದಲ್ಲಿ ಸರ್ಕಾರವು ಎಲ್ಲಾ ಸಮುದಾಯದ ಮಹಾನ್ ಪುರುಷರ ಜಯಂತಿ ಆಚರಣೆಗೆ ಘೋಷಣೆ ಮಾಡಿರುವಂತೆ ಈ ವೀರ ರುದ್ರವನ್ನಿ ಮಹಾರಾಜರ ಜಯಂತಿ ಆಚರಣೆಗೆ ಸರ್ಕಾರ ಘೋಷಣೆ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ನಮ್ಮ ಹೋರಾಟ ಸಾಗಬೇಕಾಗಿದೆ ಎಂದರು.
ನಂತರ ಮಾತನಾಡಿದ ಮಹಾಸಭಾದ ರಾಜ್ಯಮಹಾಪ್ರಧಾನ ಕಾರ್ಯದರ್ಶಿ ಜಿ.ವಿ.ಗಣೇಶಪ್ಪ ವನ್ನಿಕುಲ ಕ್ಷತ್ರಿಯ ಸಮಾಜದ 60 ರಿಂದ 70 ಲಕ್ಷ ಜನಸಂಖ್ಯೆ ಇದ್ದರೂ ಸಹ ಯಾವುದೇ ತರಹದ ರಾಜಕೀಯ ಸ್ಥಾನಮಾನಗಳನ್ನು ಪಡೆಯದೇ ಸಮಾಜ ಕಡೆಗಣಿಸಲ್ಪಟ್ಟಿದೆ.1200 ವರ್ಷಕ್ಕೂ ಹೆಚ್ಚು ಕಾಲ ದೇಶವನ್ನಾಳಿದ ಸಮಾಜಕ್ಕೆ ಯಾವುದೇ ಸ್ಥಾನಮಾನ ನೀಡದೇ ಕಡೆಗಣಿಸಿರುವುದು ನಮ್ಮನ್ನಾಳುವ ಸರ್ಕಾರದ ದ್ವಿಮುಖ ನೀತಿಯನ್ನು ಬಿಂಬಿಸುತ್ತದೆ.ಎಲ್ಲಾ ಜಯಂತಿಗಳನ್ನು ಸರ್ಕಾರ ಹೇಗೆ ಆಚರಿಸುತ್ತಿದೆಯೋ ಅದೇ ತರಹ ಮುಂದಿನ ದಿನಗಳಲ್ಲಿ ಶ್ರೀ ವೀರರುದ್ರ ವನ್ನಿಕುಲ ಮಹರಾಜರ ಜಯಂತಿಯನ್ನು ಸರ್ಕಾರವೇ ಆಚರಿಸಬೇಕೆಂದು ಸಮಾಜದ ಪರವಾಗಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷರಾದ ಚಂದ್ರು,ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಟಿ.ಪೆರುಮಾಳ್,ರಮೇಶ್,ಖಜಾಂಚಿ ವಿ.ಮುರುಗೇಶ್,ಸಹಕಾರ್ಯದರ್ಶಿ ಪಿ.ರವಿಕುಮಾರ್,ಭದ್ರಾವತಿಯ ಮಣಿಗೌಂಡರ್,ಉಮಾಪತಿ,ಶ್ರೀನಿವಾಸ,ನಾಗರಾಜ,ಮೋಕ್ಷಾನಂದಾ ಹಾಗೂತಾಲೂಕ್ ಅಧ್ಯಕ್ಷ ರಾಜು,ಮುಖಂಡರಾದ ಮತ್ತೂರು ಗೋಪಾಲ್,ಮಿಳಗಟ್ಟ ಪರುಶುರಾಮ,ಯುವ ಮುಖಂಡ ಅಯ್ಯಪ್ಪ,ಆಯನೂರು ಕಾರ್ಯಧ್ಯಕ್ಷ ಅಣ್ಣಪ್ಪ ಹಾಗೂ ರಾಜ್ಯ ಪಧಾದಿಕಾರಿಗಳಾದ ಕಾರ್ಯಧ್ಯಕ್ಷ ಚಂದ್ರು ಉಪಾಧ್ಯಕ್ಷರಾದ ಶಶಿಕುಮಾರ್ ಚಂದ್ರಶೇಖರ್ ಚಿನ್ನೀಕೃಷ್ಣ,ಹೈಕೋರ್ಟ್ ವಕೀಲೆಯಾದ ಶ್ರೀಮತಿ ಗೀತಾ ಚಕ್ರವರ್ತಿ,ರೇಣುಕಾದೇವಿ ಮತ್ತು ಸಮುದಾಯದ ಎಲ್ಲಾ ಮುಖಂಡರುಗಳು ಭಾಗವಹಿಸಿದ್ದರು.