ಶಿವಮೊಗ್ಗ: ಎಸ್.ವಿ.ಶಾಸ್ತ್ರಿ ಅವರು ಶಿವಮೊಗ್ಗ ನಗರದ ದೊಡ್ಡ ಆಸ್ತಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು ಅವರು ನಗರದ ರಂಗಮoದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಎಸ್.ವಿ.ಶಾಸ್ತ್ರಿ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಶಿಕ್ಷಕರಾಗಿ ಎಷ್ಟೋ ವಿದ್ಯಾರ್ಥಿಗಳಿಗೆ ಸರಿಯಾದ ದಾರಿಯಲ್ಲಿ ನಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಂಥ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಾನೂ ಒಬ್ಬ ಎಂದು ಈಶ್ವರಪ್ಪನವರು ಹೇಳಿದರು.
ಒಬ್ಬ ಉಪಾಧ್ಯಾಯ ೯೧ ಮಂದಿಗೆ ರಕ್ತ ಕೊಟ್ಟಿದ್ದಾರೆ ಎಂಬುದು ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತೋರಿಸಿಕೊಡುತ್ತದೆ. ಜೆಸಿ ಸಂಸ್ಥೆ ಮೂಲಕ ಅನೇಕ ಕಾರ್ಯಕ್ರಮ ಮಾಡಿ ಸಾವಿರಾರು ಯುವಕ-ಯುವತಿಯರ ಪ್ರತಿಭೆಯನ್ನು ಹೊರತಂದಿದ್ದಾರೆ’ ಎಂದರು. ವಿಧಾನ ಸಭಾ, ಲೋಕಸಭಾ ಲೋಕವೇ ಬೇರೆ ಎಂದು ಮಾದರಿ ಪಾರ್ಲಿಮೆಂಟ್ ಮಾಡಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತೋರಿಸಿಕೊಟ್ಟ ವಿಶೇಷ ವ್ಯಕ್ತಿ’ ಎಂದು ವರ್ಣಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಹೆಚ್.ಶಂಕರ ಮೂರ್ತಿಯವರು ಅಭಿನಂದನಾ ಭಾಷಣ ಮಾಡುತ್ತ ಒಂದು ಸಂಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಶಾಸ್ತ್ರೀಯವರಿಗೆ ಸಂದಿದೆ ಎಂದರು.
ಉಪಾಧ್ಯಾಯರಾಗಿ ತಮ್ಮ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ ಗುರುಗಳಾಗಿದ್ದಾರೆ, ಇವರ ಶಿಷ್ಯರು ಹಲವಾರು ಉನ್ನತ ಹುದ್ಧೆಯಲ್ಲಿ ಈಗಲೂ ಕಾರ್ಯ ನಿರ್ವಹಿಸುತ್ತಿದ್ದಾರೆ, ಸೇವೆಯೇ ಪರಮಗುರಿ ಎಂದು ನಂಬಿ ನಡೆದ ಶಾಸ್ತ್ರಿಯವರ ಸೇವಾ ಭಾವನೆಯನ್ನು ಕೊಂಡಾಡಿದರು. ವ್ಯಕ್ತಿತ್ವ ವಿಕಸನ, ಭಾಷಣಕಲೆ, ಸಂಸದೀಯ ವ್ಯವಹಾರ, ಸಂಘ ಸಂಸ್ಥೆಗಳಲ್ಲಿ ನಮ್ಮ ಭಾಗವಹಿಸುವಿಕೆ ಇತ್ಯಾದಿ ವಿಷಯಗಳ ಬಗ್ಗೆ ಉತ್ತಮ ತರಬೇತಿ ನೀಡಿ ಸಾವಿರಾರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಜೇಸೀ ಸಂಸ್ಥೆಯುಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇವರನ್ನು ಗುರುತಿಸಿದ್ದು ನಮ್ಮ ನಗರಕ್ಕೆ ಹಮ್ಮೆಯ ಸಂಗತಿಯಾಗಿದೆ ಎಂದರು.
ಅಭಿನಂದನಾ ಸ್ವೀಕರಿಸಿ ಡಾ.ಎಸ್.ವಿ.ಶಾಸ್ತ್ರಿ ಅವರು ಮಾತನಾಡುತ್ತ ಮುಂದಿನ ನನ್ನ ಜೀವನದ ಗುರಿ ಒಂದೇ ಅದೇ ಸಂಸ್ಕೃತ ಮಾತೆಯ ಕೆಲಸ ಎಂದು ಅವರು ತಿಳಿಸಿದರು. ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ ಅದರಿಂದ ನನಗೆ ತೃಪ್ತಿ ಇದೆ, ಆದರೆ ನನಗೆ ಬಾಲ್ಯದಿಂದಲೂ ಸಂಸ್ಕೃತ ಭಾಷೆ ಬಗ್ಗೆ ಹೆಚ್ಚಿನ ಅಭಿಮಾನ ಇದ್ದು ಸಾಕಷ್ಟು ಸಂಸ್ಕೃತ ಅಧ್ಯಯನ ಮಾಡಿದ್ದೇನೆ, ನನ್ನ ಅನುಭವ ಹಾಗೂ ನಾನು ಸಂಸ್ಕೃತ ಬಾಷೆಗೆ ಏನನ್ನಾದರೂ ಮಾಡಬೇಕೆಂಬ ಹಂಬಲದಿಂದ ಇನ್ನು ನನ್ನ ಮುಂದಿನ ಜೀವನವನ್ನು ಸಂಸ್ಕೃತ ಭಾಷೆಯ ಪ್ರಸಾರ, ಪ್ರಚಾರಕ್ಕೆ ಮೀಸಲಿಡುತ್ತೇನೆ ಎಂದು ಘೋಷಿಸಿದರು.
ನಗರದ ವಾಸವಿ ಅಕಾಡೆಮಿ ಇವರು ಪ್ರಾಥಮಿಕ ಹಂತದಿಂದ ಏಳನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸುವ ಯೋಜನೆ ರೂಪಿಸಿರುತ್ತಾರೆ ಅವರ ಯೋಜನೆಗೆ ನಾನು ಕೈ ಜೋಡಿಸುತ್ತೇನೆ ಎಂದು ಭರವಸೆ ನೀಡಿದರು ಸಂಸ್ಕೃತ ಕಲಿಕೆ ಬಾಲ್ಯದಿಂದಲೇ ಆದರೆ ಮಕ್ಕಳಿಗೆ ಅಪಾರ ಜ್ಞಾನ ಲಭಿಸುತ್ತದೆ ಈ ನಿಟ್ಟಿನಲ್ಲಿ ನನ್ನ ಪಯಣ ಸಾಗಲಿದೆ ಎಂದರು. ಅತ್ಯಂತ ಶ್ರದ್ಧೆಯಿಂದ ನನಗೆ ಈದಿನ ನಗರದ ಗಣ್ಯರು, ನನ್ನ ಶಿಷ್ಯರು, ಅಭಿಮಾನಿಗಳು ನನ್ನನ್ನು ಅಭಿನಂದಿಸಿ ನನಗೆ ಗೌರವಿಸಿರುತ್ತಾರೆ ಅವರಿಗೆಲ್ಲ ನನ್ನ ವಂದನೆಗಳು ಎಂದು ಹೇಳಿದರು.
ಅಭಿನಂದನ ಸಮಾರಂಭದ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರು, ಸೂಡಾ ಮಾಜಿ ಅಧ್ಯಕ್ಷ ಜ್ಯೋತಿ ಪ್ರಕಾಶ್, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಗೋಪಿನಾಥ್, ನಾಗರೀಕ ಹಿತ ರಕ್ಷಣೆ ವೇದಿಕೆ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್, ನಗರದ ಜೇಸೀ ಸಂಸ್ಥೆಯ ಅಧ್ಯಕ್ಷರುಗಳು, ಅಭಿನಂದನ ಸಮಿತಿಯವರಾದ ಜಿ.ವಿಜಯಕುಮಾರ್, ಓಂ ಗಣೇಶ್ ಶೇಟ್, ದರಣೇಂದ್ರ ದಿನಕರ್, ಅ.ನಾ.ವಿಜಯೇಂದ್ರ ರಾವ್, ಮಹಾನಗರ ಪಾಲಿಕೆ ಸದಸ್ಯರಾದ ಸುರೇಖಾ ಮುರಳೀಧರ್, ಎಸ್. ಸಿ.ಯೋಗೀಶ್, ವಿಶ್ವಾಸ್, ವೆಂಕಟೇಶ್ ಮೂರ್ತಿ, ವಾಲಿಬಾಲ್ ಪರಮೇಶ್, ಖಾದರ್ ಪಾಷ, ಭಾಸ್ಕರ್ ಕಾಮತ್, ಅಮೃತ್ ನೋನಿ ಮುಖ್ಯಸ್ಥ ಶಶಿಧರ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಮುಖರಾದ ಎಸ್.ಕೆ.ಶೇಷಾಚಲ, ಹರ್ಷ ಕಾಮತ್, ವಾಗೇಶ್, ಶಾಂತ ಶೆಟ್ಟಿ, ಚಂದ್ರಶೇಖರ್, ಪುಷ್ಪಾ ಶೆಟ್ಟಿ, ಸುಗುಣ ಸತೀಶ್, ಸಹನಾ ಚೇತನ್, ಸಂತೋಷ್ ಅನುಷ್ ಗೌಡ, ಇವರುಗಳು ವಿಶೇಷವಾಗಿ ಕಾರ್ಯಕ್ರಮ ನಿರೂಪಿಸಿದರು.