ಎನ್‌ಎಸ್‌ಯುಐ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಇಂದು ಭದ್ರಾವತಿಯ ಕಾಂಗ್ರೆಸ್ ಯುವ ಮುಖಂಡ ಗಣೇಶ್ ಮತ್ತು ಮಾಜಿ ಶಾಸಕ ಮೊಹಿದ್ದೀನ್ ಬಾವ ಇವರ ಸಹಕಾರದಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಲಾಯಿತು.
ವಿದ್ಯಾನಗರದ ಬೈಪಾಸ್ ರಸ್ತೆಯಲ್ಲಿರುವ ಅಲೆಮಾರಿ ನಿವಾಸಿಗಳಿಗೆ ಆಹಾರಕಿಟ್ ವಿತರಣೆ ಮಾಡಿ ಮಾತನಾಡಿದ ಗಣೇಶ್, ಕೊರೋನಾ ಮಹಾಮಾರಿ ಜನರನ್ನು ಸಾಕಷ್ಟು ಸಂಕಷ್ಟಕ್ಕೀಡು ಮಾಡಿದೆ. ಇಂತಹ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ‘ಹಸಿದವರಿಗೆ ಸಹಾಯಹಸ್ತ’ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಅದರ ಮುಂದುವರೆದ ಭಾಗವಾಗಿ ಇಂದು ಎನ್‌ಎಸ್‌ಯುಐ ಅಗತ್ಯವಿರುವವರಿಗೆ ಆಹಾರದ ಕಿಟ್ ವಿತರಿಸುತ್ತಿದೆ ಎಂದರು.
ಕಾAಗ್ರೆಸ್ ಎಂದಿಗೂ ಜನಪರವಾಗಿದ್ದು, ಜನರು ಸಂಕಷ್ಟದಲ್ಲಿರುವಾಗ ನೆರವಾಗುವ ಸಂಸ್ಕೃತಿ ರೂಢಿಸಿಕೊಂಡಿದೆ. ಇಂದು ಎನ್‌ಎಸ್‌ಯುಐ ವತಿಯಿಂದ ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಬಾಲಾಜಿ, ನಗರಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ, ಪ್ರಮುಖರಾದ ವಿನಯ್, ಗಿರೀಶ್ ,ಪ್ರಮೋದ್, ಶಿವು,ಆಕಾಶ್ , ಚಂದೋಜಿರಾವ್, ಅಬ್ದುಲ್ಲಾ, ಪುರಲೆ ಮಂಜು, ಧನರಾಜ್,ಸಂದೀಪ್, ಭರತ್ ,ಅನಿಲ,ಅರುಣ,ಗೌತಮ್, ಸಂದೇಶ, ಯುವ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ಕೆ. ಚೇತನ್, ಯುವಮುಖಂಡ ಸಿ.ಜೆ. ಮಧುಸೂಧನ್ ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ