ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯಿಂದ ಕೊಡಮಾಡುವ ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ಕ್ರೀಡಾ, ನೃತ್ಯ, ಸಂಗೀತ, ಸಾಹಿತ್ಯ, ಕರಕುಶಲ, ಚಿತ್ರಕಲೆ, ಬಹುಮುಖ ಪ್ರತಿಭೆ, ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ, ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನ ಮುಂತಾದ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುವಂತಹ 18 ವರ್ಷದೊಳಗಿನ ಮಕ್ಕಳಿಗೆ ಬಾಲ ಗೌರವ ಪ್ರಶಸ್ತಿ ಮತ್ತು ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು.
ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಜನನ ಪ್ರಮಾಣ ಪತ್ರ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿರುವ/ ಪ್ರಶಸ್ತಿ ಪಡೆದಿರುವ ಮಾಹಿತಿ ನೀಡಬೇಕು. ಕ್ರೀಡಾ, ನೃತ್ಯ, ಸಂಗೀತ, ಸಾಹಿತ್ಯ, ಕರಕುಶಲ, ಚಿತ್ರಕಲೆ, ನಾಟಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರಬೇಕು.


ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಜನನ ಪ್ರಮಾಣ ಪತ್ರ, 2019-2020 ಮತ್ತು 2021 ನೇ ಸಾಲಿನ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ, ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ), ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿಗಳ 4 ಪ್ರತಿಗಳನ್ನು ಲಗತ್ತಿಸಿ ದಿ: 31/03/2022 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಯೋಜನಾಧಿಕಾರಿಗಳು, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಹೆಚ್.ಬಿ.ಕಾಲೋನಿ, ಲಕಮನಹಳ್ಳಿ, ಧಾರವಾಡ-580004, ದೂ.ಸಂ.: 0836-2461666 ನ್ನು ಸಂಪರ್ಕಿಸುವುದು.

ವರದಿ ಮಂಜುನಾಥ್ ಶೆಟ್ಟಿ…