ಹುಂಚ ನ್ಯೂಸ್…

ಹುಂಚ ಹತ್ತಿರ ಮೂಡ್ಲಿ ಗ್ರಾಮಸ್ಥರಿಂದ ರಸ್ತೆ ಕಾಮಗಾರಿ ಸ್ಥಳಾಂತರ ಖಂಡಿಸಿ ಇಂದು ಪ್ರತಿಭಟನೆ ಮಾಡಿದರು.

ಶಾಸಕರ ಅನುದಾನದಲ್ಲಿ ಮೂಡ್ಲಿ ಗ್ರಾಮಕ್ಕೆ 40 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದರು. ಆದರೆ ಸ್ಥಳೀಯ ಮುಖಂಡರು ಮತ್ತು ಕಂಟ್ರಾಕ್ಟರ್ ವತಿಯಿಂದ ರಸ್ತೆ ಕಾಮಗಾರಿಯನ್ನು ಇನ್ನೊಂದು ಗ್ರಾಮಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಕಂಟ್ರಾಕ್ಟರ್ ಮತ್ತು ಇಂಜಿನಿಯರ್ ನಾವು ಶಾಸಕರ ಹೇಳಿದ ರೀತಿಯಲ್ಲಿ ಕೆಲಸ ಮಾಡುತ್ತಿವೆ, ಗ್ರಾಮಸ್ಥರ ಹೇಳಿದ ರೀತಿಯಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂದು ಗ್ರಾಮಸ್ಥರಿಗೆ ಬೇಜವಾಬ್ದಾರಿ ಹೇಳಿಕೆ ನೀಡಿದರು.

ನಂತರ ಗ್ರಾಮಸ್ಥರು ನೀವು ಈ ರಸ್ತೆಯನ್ನು ಮೂಡ್ಲಿ ಗ್ರಾಮದಿಂದ ಪ್ರಾರಂಭಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಲಿಂಗಪ್ಪ, ಅರುಣ, ಕುಮಾರ, ಚಂದನ್, ದಿವಾಕರ್, ರತ್ನಾಕರ ಗೌಡ, ನೀಲಪ್ಪ, ಗೀತ, ದಿವ್ಯ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…