ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ವತಿಯಿಂದ ಮಾನ್ಯ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಪೋಲಿಸ್ ಇಲಾಖೆ ನೇಮಕಾತಿ ಪ್ರಕ್ರಿಯೆಯಲ್ಲಿ ನೀಡುತ್ತಿರುವ ಸ್ಪೋರ್ಟ್ಸ್ ಕೋಟಾದಲ್ಲಿ ಕರಾಟೆ ಕ್ರೀಡೆಯನ್ನು ಸೇರ್ಪಡಿಸುವಂತೆ ಮನವಿ ಮಾಡಲಾಯಿತು.

ಇತ್ತೀಚೆಗೆ ಕರ್ನಾಟಕ ಸರ್ಕಾರ ಪಿ ಎಸ್ ಐ
ನೇಮಕಾತಿಯಲ್ಲಿ 2% ಸ್ಪೋರ್ಟ್ಸ್ ಕೋಟ ವನ್ನು ನೀಡಿರುವುದು ಸಂತಸದ ವಿಚಾರ ವಾಗಿದು
ಆದರೆ ಈ ಕೋಟಾದಡಿಯಲ್ಲಿ ಬರುವ ಕ್ರೀಡೆಗಳ ಪಟ್ಟಿಯಲ್ಲಿ ಕರಾಟೆ ಕ್ರೀಡೆ ಇಲ್ಲ ಕರಾಟೆ ಕಲೆಯು ಸ್ವರಕ್ಷಣೆಗೆ ಹಾಗೂ ಇತರ ರಕ್ಷಣೆಗೆ ಬಹಳ ಮುಖ್ಯವಾದ ಕಲೆಯಾಗಿದು ಪೊಲೀಸ್ ಇಲಾಖೆಯ ತರಬೇತಿ ಯಲ್ಲಿಯೂ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕರಾಟೆ ತರಬೇತಿಯನ್ನು ನೀಡಲಾಗುತ್ತದೆ.

ಪೊಲೀಸ್ ಇಲಾಖೆಯಲ್ಲಿ ಪ್ರತಿಯೊಬ್ಬ ಸಿಬ್ಬಂದಿ ಹಾಗೂ ಅಧಿಕಾರಿ ಗಳಿಗೂ ಅನ್ ಆರ್ಮಡ್ combat ಟ್ರೈನಿಂಗ್ ಬಹಳ ಮುಖ್ಯವಾದದ್ದು ಹೀಗಿರುವ ಸಂದರ್ಭದಲ್ಲಿ ಇತ್ತೀಚೆಗೆ ಇಲಾಖೆಯ ಆಯ್ಕೆ ಪ್ರಕ್ರಿಯೆಯಲ್ಲಿ ನೀಡಿರುವ 2% ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಹಲವು ಕ್ರೀಡೆಗಳು ಇದ್ದು ಅದರಲ್ಲಿ ಕರಾಟೆ ಕ್ರೀಡೆ ಇಲ್ಲ ಪೊಲೀಸ್ ಇಲಾಖೆಯಲ್ಲಿ ಕರಾಟೆ ಕ್ರೀಡೆಯ ಪ್ರಾಮುಖ್ಯತೆಯನ್ನು ತಾವು ಗಮನ ಹರಿಸಿ ಕರಾಟೆ ಕ್ರೀಡೆಯಲ್ಲಿ AIU ನಲ್ಲಿ ಪದಕ ವಿಜೇತರು ಹಾಗೂ ವರ್ಲ್ಡ್ ಕರಾಟೆ ಫೆಡರೇಷನ್ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಸ್ಪೋರ್ಟ್ಸ್ ಕೋಟಾದ ಅಡಿಯಲ್ಲಿ ಸೇರ್ಪಡಿಸಿ ಕರಾಟೆ ಕ್ರೀಡಾಪಟುಗಳು ಪೋಲಿಸ್ ಇಲಾಖೆಯಲ್ಲಿ ಸೇರಬೇಕೆನ್ನುವ ಆಶಯಕ್ಕೆ ಸಹಕರಿಸಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಮೊಗ್ಗ ವಿನೋದ್ ಮತ್ತು ಸಂಸ್ಥೆಯ ಪ್ರಮುಖರಾದ ಅಮಿತ್ ಎನ್ ಕೆ ಮತ್ತು ಜಸ್ಟಿನ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…