ಹೆಚ್ಚುತ್ತಿರುವ ಕೋವಿಡ ನಿಂದಾಗಿ ಇಂದು ನಡೆದ ಆಯನೂರು ಗ್ರಾಮ ಪಂಚಾಯಿತಿ ಸಭೆಯಲ್ಲಿ ಭಾನುವಾರದಂದು ಆಯನೂರನ್ನು ಸಂಪೂರ್ಣ ಬಂದ್ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು . ಆಯನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗೇಂದ್ರ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ PDO ಶಶಿಕಲಾ ಹಾಗೂ ಸಿಬ್ಬಂದಿ ವರ್ಗ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು . ಈ ಸಂದರ್ಭದಲ್ಲಿ ನಾಗೇಂದ್ರ ನಾಯ್ಕ್ ಅವರು ಈ ಕರೋನಾ ಮಹಾಮಾರಿ ಯನ್ನು ತಡೆಯಲು ಆಯನೂರು ಜನರು ಸಹಕರಿಸಬೇಕಾಗಿ ಕೇಳಿಕೊಂಡರು