ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಯ ಸ್ಥಿತಿಗತಿಗಳನ್ನು ತಿಳಿಸಿದರು. ಭದ್ರಾವತಿಯ VSIL ಪೂರ್ತಿಯಾಗಿ ಆಕ್ಸಿಜನ್ ತಯಾರಿಕೆಯಲ್ಲಿ ನಿರತವಾಗಿದೆ . ಶಿವಮೊಗ್ಗದಲ್ಲಿ ಕರೋನ ಲಸಿಕೆಯ ಬ್ಲಾಕ್ ಮಾರ್ಕೆಟ್ ತಡೆಯಲು ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆ . ಜಿಲ್ಲೆಯಲ್ಲಿ ಒಟ್ಟು 129 ಕಂಟೈನ್ ಮೆಂಟ್ ಜೋನ್ ಇದೆ . ಸೋಮವಾರ ಸೊರಬ ಹಾಗೂ ಹೊಸನಗರದಲ್ಲಿ ಹೊಸ ಕೋವಿಡ ಕೇಂದ್ರ ಪ್ರಾರಂಭವಾಗಲಿದೆ . ಶಿವಮೊಗ್ಗದಲ್ಲಿ 78 ಆಕ್ಸಿಜನ್ ಬೆಡ್ ಲಭ್ಯವಿದೆ . ಜಿಲ್ಲಾ ಲಸಿಕಾ ಕೇಂದ್ರಗಳಲ್ಲಿ ಎರಡನೇ ಡೋಸ್ ಅನ್ನು ಮಾತ್ರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ದಿನದ ಪಾಸಿಟಿವಿಟಿ ರೇಟ್ 39 ಇದ್ದು ಸಾರ್ವಜನಿಕರ ಸಹಕಾರದೊಂದಿಗೆ ನಾವು ಕರೋನ ಚೈನ್ ಬ್ರೇಕ್ ಮಾಡಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಎಲ್ಲಾ ಆರೋಗ್ಯ ಸಿಬ್ಬಂದಿಗಳು ಕೂಡ ಅವಿರತವಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ . ಹಾಗಾಗಿ ಎಲ್ಲರೂ ಕೂಡ ಆರೋಗ್ಯ ಸಿಬ್ಬಂದಿಗಳನ್ನು ಮಾನವೀಯ ನೆಲೆಗಳಲ್ಲಿ ನೋಡಲು ಕೋರಿಕೊಂಡರು .
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ