ಶಿವಮೊಗ್ಗ: ನೀರಿನ ಸಂರಕ್ಷಣೆ ಬಗ್ಗೆ ಜನರು ಸರಿಯಾದ ತಿಳವಳಿಕೆ ಹೊಂದಿಲ್ಲ. ನೀರನ್ನು ಮನಸ್ಸಿಗೆ ಬಂದAತೆ ಪೋಲು ಮಾಡುವುನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ನೀರಿನ ಮಹತ್ವ ಅರಿತುಕೊಂಡು ನೀರಿನ ಸಂರಕ್ಷಣೆ ಮಾಡುವುದು ಅತ್ಯಂತ ಅವಶ್ಯಕ ಎಂದು ಸಿವಿಲ್ ಇಂಜಿನಿಯರ್ ಉಮೇಶ್ ಹೇಳಿದರು.
ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿAದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ ವಿಷಯ ಕುರಿತು ಮಾತನಾಡಿ, ನೀರನ್ನು ವ್ಯರ್ಥ ಮಾಡುವುದು ನಾವು ಪ್ರಕೃತಿಯ ಮೇಲೆ ಮಾಡುವ ದಾಳಿಯಾಗಿದೆ. ನೀರು ನಮಗೆ ನಿಸರ್ಗವು ನೀಡಿದ ವರ. ಇದನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುವ ನಿರ್ವಹಣೆ ಮಾಡದೇ ಇದ್ದಲ್ಲಿ ಮುಂದೊAದು ದಿನ ನಾವುಗಳು ನೀರಿಗಾಗಿ ಕಷ್ಟ ಪಡಬೇಕಾದ ದಿನ ದೂರವಿಲ್ಲ ಎಂದು ತಿಳಿಸಿದರು.
ಭೂಭಾಗದಲ್ಲಿ ಶೇ. 75ರಷ್ಟು ಜಾಗದಲ್ಲಿ ನೀರು ಆವರಿಸಿಕೊಂಡಿದ್ದರೂ ಅದರಲ್ಲಿ ಶೇ. 95 ಭಾಗ ನೀರಿರುವುದು ಸಾಗರದಲ್ಲಿ ಎಂಬುದನ್ನು ಮರೆಯುವಂತಿಲ್ಲ.ಇದು ನೇರವಾಗಿ ಬಳಕೆಗೆ ಬರುವುದಿಲ್ಲ. ಇನ್ನುಳಿದ ನೀರಲ್ಲಿ ಶೇಕಡ ಎರಡರಷ್ಟು ಮಂಜುಗಡ್ಡೆಯ ರೂಪದಲ್ಲಿದ್ದರೆ ಮತ್ತು ಉಳಿದ ಮೂರರಷ್ಟು ನೀರು ಮಾತ್ರ ಉಪಯೋಗಿಸಲು ಯೋಗ್ಯವಾಗಿದೆ. ನಾವು ಜಗತ್ತಿನಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಇರುವ ನೀರನ್ನು ಬಹಳ ಜವಾಬ್ದಾರಿಯಿಂದ ಬಳಸಿ ಮುಂದಿನ ಪೀಳಿಗೆಗೂ ಬಳಕೆಗೆ ಯೋಗ್ಯವಾದ ನೀರನ್ನು ಉಳಿಸಬೇಕಿದೆ ಎಂದರು.
ನೈಸರ್ಗಿಕವಾಗಿ ವರ್ಷ ಪ್ರತಿ ಬೀಳುವ ಮಳೆಯೊಂದೇ ನಮಗಿರುವ ಏಕೈಕ ನೀರಿನ ಮೂಲ. ಇದರಿಂದ ಹಳ್ಳ ಕೆರೆ ನದಿ ಮತ್ತು ಜಲಾಶಯಗಳಲ್ಲಿ ನೀರು ಸಂಗ್ರಹವಾಗಿ ನೀರು ಕಾಲಚಕ್ರದಲ್ಲಿ ಭೂಮಿಯಲ್ಲಿ ಇಂಗುತ್ತದೆ ಹಾಗೂ ಹೆಚ್ಚಿನದು ಹರಿದು ಸಮುದ್ರವನ್ನು ಸೇರುತ್ತದೆ ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಆವಿಯಾಗಿ ಮೋಡವಾಗಿ ಆಕಾಶದಲ್ಲಿ ಶೇಖರಣೆಯಾಗುತ್ತದೆ. ನಂತರ ವಾತಾವರಣದ ಉಷ್ಣತೆಯ ಏರಿಳಿತಗಳ ಮೂಲಕ ಚಳಿಗಾಲ ಸೆಕೆಗಾಲ ತದನಂತರ ಮೋಡಗಳಿಂದ ಮಳೆಯಾಗಿ ಭೂಮಿಗೆ ಸೇರುವುದು ಪ್ರಕೃತಿಯ ನಿಯಮ ಎಂದು ಹೇಳಿದರು.
ಪ್ರತಿಯೊಬ್ಬರೂ ಅವರಿಗೆ ಬೇಕಾಗುವ ನೀರನ್ನು ತಮ್ಮ ಮನೆಯ ಛಾವಣಿಯ ಮೇಲೆ ಬೀಳುವ ಮಳೆಯ ನೀರನ್ನು ಹಿಡಿದಿಡುವ ಮೂಲಕ ಮಳೆ ನೀರಿನ ಕೊಯ್ಲು ಸಂಗ್ರಹಿಸಿ ಉಪಯೋಗಿಸುವುದು ಸೂಕ್ತ. ಪ್ರತಿಯೊಬ್ಬ ರೋಟರಿ ಸದಸ್ಯರು ಮೊದಲು ತಮ್ಮ ತಮ್ಮ ಮನೆಯಲ್ಲಿ ಯಾವ ರೀತಿಯಲ್ಲಿ ನೀರು ಸಂಗ್ರಹಿಸಬಹುದೆAದು ಆಲೋಚಿಸಿ ಅರಿವು ಮೂಡಿಸಬೇಕು. ಮುಂದಿನ ಪೀಳಿಗೆಗೂ ಕೂಡ ಅಮೂಲ್ಯ ಜೀವ ಜಲವನ್ನು ಉಳಿಸಿಕೊಳ್ಳಲು ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಉಪಾಧ್ಯಕ್ಷ ವಸಂತ್ ಹೋಬಳಿದಾರ್ ಮಾತನಾಡಿ, ನೀರನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ನಾವುಗಳು ನೀರಿನ ಬಗ್ಗೆ ಅರಿವು ಮೂಡಿಸಿ ಅದರ ಸಂರಕ್ಷಣೆ ಮಾಡಬೇಕು. ನೀರನ್ನು ಅತ್ಯಂತ ಅಮೂಲ್ಯವಾದ ವಸ್ತುವನ್ನಾಗಿ ಗಮನದಲ್ಲಿಟ್ಟುಕೊಂಡು ಬಳಸುವುದು ತುಂಬಾ ಮುಖ್ಯವಾಗಿದೆ, ಸಕಲ ಜೀವಿಗಳಿಗೂ ನೀರು ಅತ್ಯಮೂಲ್ಯ. ಆದ್ದರಿಂದ ಅವಶ್ಯಕತೆ ಇದ್ದಾಗ ನೀರನ್ನು ಮಿತವಾಗಿ ಬಳಸಿ ನೀರನ್ನು ಉಳಿಸಬೇಕು ಎಂದರು.
ರೋಟರಿ ಶಿವಮೊಗ್ಗ ಪೂರ್ವ ಜಂಟಿ ಕಾರ್ಯದರ್ಶಿ ಕೆ.ಕುಮಾರಸ್ವಾಮಿ, ಜಿ.ವಿಜಯ್ ಕುಮಾರ್, ಗಣೇಶ ಎಸ್, ರಾಮಚಂದ್ರ.ಎಸ್.ಸಿ, ಸುಬ್ಬೆಗೌಡ ಹಾಗೂ ಇತರೆ ರೋಟರಿ ಸದಸ್ಯರು ಉಪಸ್ಥಿತರಿದ್ದರು.