ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಪಡಿತರ ಅಕ್ಕಿ ವಿತರಣೆಗೆ ಮಹಾನಗರ ಪಾಲಿಕೆ
ಸದಸ್ಯರಾದ ರೇಖಾ ರಂಗನಾಥ್ ರವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಘೋಷಣೆ
ಮಾಡಿದಂತೆ ಪ್ರಧಾನಮಂತ್ರಿ ಗರೀಬ್ ಅನ್ನ ಕಲ್ಯಾಣ ಯೋಜನೆಯಲ್ಲಿ ಪಡಿತರ ಚೀಟಿಯ ಕುಟುಂಬದ
ಪ್ರತಿ ಸದಸ್ಯರಿಗೆ 5 ಕೆಜಿ ಅಧಿಕ ಅಕ್ಕಿ ಯನ್ನು ನೀಡುತ್ತಿದ್ದು ಈ ಯೋಜನೆಯನ್ನು ಅರ್ಹ
ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ನಿರ್ವಹಿಸಬೇಕು
ಎಂದರು.

ಈಗಾಗಲೇ ಬೇಳೆಕಾಳು ಎಣ್ಣೆ ಪದಾರ್ಥಗಳ ಬೆಲೆಗಳು ಗಗನಕ್ಕೇರಿದ್ದು ಇಂತಹ ಸಂದರ್ಭದಲ್ಲಿ
ನಮ್ಮ ಸರ್ಕಾರಗಳು ಅಕ್ಕಿ ಕಡಿಮೆ ಮಾಡಿ ಇವುಗಳ ಪೂರೈಕೆ ಮಾಡಿದರೆ ಬಡಕುಟುಂಬಗಳ ಜೀವ
ನಿರ್ವಹಣೆ ಅಸನ ವಾಗಿರುತ್ತದೆ ಎಂದು ಹೇಳಿದರು ಹಾಗೂ ನಮ್ಮ ಬಡಾವಣೆಯಲ್ಲಿ ಹಲವು ಪಡಿತರ
ಚೀಟಿ ಗಳನ್ನು ಅಧಿಕಾರಿಗಳು ಕೆಲವೊಂದು ತಾಂತ್ರಿಕ ಕಾರಣಗಳಿಂದ ರದ್ದು ಮಾಡಿದ್ದು,
ಇದರಿಂದ ನಿಜವಾದ ಕಡುಬಡವರು ಪಡಿತರ ವಂಚಿತರಾಗುತ್ತಿದು  ಕೂಡಲೇ ರದ್ದುಮಾಡಿದ ಪಡಿತರ
ಚೀಟಿಯ ಗಳನ್ನು ಕೂಡಲೇ ಪರಿಶೀಲಿಸಿ  ಫಲಾನುಭವಿಗಳಿಗೆ  ಪಡಿತರವನ್ನು ವಿತರಿಸಬೇಕು
ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ  ಜಂಟಿ ನಿರ್ದೇಶಕರಾದ
ಮಂಜುನಾಥ್ ರವರು ಸಹಾಯಕ ನಿರ್ದೇಶಕರಾದ ಮಲ್ಲಪ್ಪನವರು, ಹೊಸಮನೆ ಹಿರಣ್ಣಯ್ಯ
ನ್ಯಾಯಬೆಲೆ ಅಂಗಡಿಯ ಮಾಲೀಕ ಕಿರಣ್ ರವರು ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…