ವಿಶ್ವವೇ ಮಹಾ ಮಾರಿಗೆ ನಲುಗಿ, ಜನ ಸಾಮಾನ್ಯರು ಸಂಕಷ್ಟದಲ್ಲಿ ಇರುವ ಸಮಯದಲ್ಲಿ ಪುಣ್ಯದ ಕೆಲಸನ್ನು ರೋಟರಿ ಜ್ಯೂಬಿಲಿ ಕ್ಲಬ್‌ ಆಯೋಜಿಸಿದೆ. ಇದು ನಮ್ಮ ದೇಶದ ಸಂಸ್ಕೃತಿ ಎಂದು ದವಸಧಾನ್ಯದ ಕಿಟ್ ಗಳನ್ನು ಅನುದಾನ ರಹಿತ ಶಾಲೆಯ ಡಿಗ್ರೂಪ್ ನೌಕರರಿಗೆ ಹಾಗೂ ಕ್ಯಾಬ್ ಚಾಲಕರಿಗೆ ವಿತ್ತರಣಾ ಕಾರ್ಯಕ್ರಮ ಉದ್ಘಾಟಿಸಿ ಸಿ.ಐ.ಟಿ.ಬಿ ಅಧ್ಯಕ್ಷರಾದ ಶ್ರೀ ಜ್ಯೋತಿ ಪ್ರಕಾಶ್ ನುಡಿದರು.ಪ್ರಪಂಚದ್ಯಾಂತ ಈ ಕೆಟ್ಟಕಾಯಿಲೆ ಬಂದಿದೆ, ದಿನ ದುಡಿದು ಬದುಕುವವರಿಗೆ ಬಹಳ ಕಷ್ಟವಾಗಿದೆ, ಊಟ ಎಲ್ಲರಿಗೂ ಬೇಕು ಅದಕ್ಕಾಗಿ ಆಹಾರ ಧಾನ್ಯ ವಿತ್ತರಿಸುವುದು ಉತ್ತಮ ಕಾರ್ಯ, ಅನ್ನದಾನ, ವಿದ್ಯಾದಾನ, ನೇತ್ರದಾನ, ರಕ್ತದಾನ ಇವೆಲ್ಲವೂ ನಮ್ಮ ದೇಶದ ಸಂಸ್ಕೃತಿ, ದಾನಿಗಳೆಲ್ಲರೂ ಅಭಿನಂದನ ಅರ್ಹರು, ಪ್ರಕೃತಿ ಪ್ರಿಯರೆಲ್ಲರೂ ಸೇರಿ ವಾಜಪೇಯಿ ಬಡಾವಣೆಯಲ್ಲಿ ಮುಚ್ಚಿಹೋಗಿದ್ದ ಕೆರೆಯನ್ನು ಪುನಃ ಕಟ್ಟುತ್ತಿದ್ದಾರೆ, ಈ ಕಾರ್ಯವನ್ನು ಮೆಚ್ಚಿ ನಮ್ಮ ಸರ್ಕಾರದ ನಗರಾಭಿವೃದ್ಧಿ ಸಚಿವರಾದ ಬೈರತ್ತಿ ಬಸವರಾಜ್ ಎರಡು ಲಕ್ಷದೇಣಿಗೆ ನೀಡುವುದಾಗಿ ತಿಳಿಸಿದರು, ಇಂತಹ ಉತ್ತಮ ಕಾರ್ಯ ದಾನಿಗಳಿಂದ ಮಾತ್ರ ಮಾಡಲು ಸಾಧ್ಯ ಎಂದರು.

ರೋಟರಿ ವಿಶ್ವಾದ್ಯಂತ ಅತ್ಯುತ್ತಮ ಕಾರ್ಯವನ್ನು ಕಳೆದ ನೂರ ಹದಿನಾರು ವರ್ಷದಿಂದ ಮಾಡುತ್ತಾ ಬಂದಿದೆ,  ಇನ್ನೂರು ದೇಶಗಳಲ್ಲಿ ಎಲ್ಲರ ಹಿತ ರಕ್ಷಣೆ ಮಾಡುತ್ತಾ ಬಂದಿದೆ. ರೋಟರಿ ಜ್ಯೂಬಿಲಿಕ್ಲಬ್ ಶಿವಮೊಗ್ಗ ದಲ್ಲಿ ಅತ್ಯುತ್ತಮ ಕಾರ್ಯಮಾಡುತ್ತಿದೆ, ಎಂದು ನಿಯೋಜಿತ ಅಸಿಸ್ಟೆಂಟ್ ಗೌರ್ನರ್ ಆನಂದಮೂರ್ತಿ ತಿಳಿಸಿದರು.  ಸಂಕಷ್ಟದಲ್ಲಿ ಇರುವವರ ನೋವಿನಲ್ಲಿ ಸಹ ಭಾಗಿ ಯಾಗು ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾರೆ, ಅದರಂತೆ ರೋಟರಿಯ ಮೂಲ ಉದ್ದೇಶವು ನೊಂದವರಿಗೆ ಸಂಜೀವಿನಿ ಯಂತೆ ಕಾರ್ಯ ನಿರ್ವಹಿಸುತ್ತಿದೆ. ವಿದೇಶದಿಂದ ಮೂರು ಕೋಟಿ ಮೌಲ್ಯದ ಯಂತ್ರೋಪಕರಣಗಳು ಮೇಘನ್ ಆಸ್ವತ್ರೆಗೆ ಕೊಡುಗೆಯಾಗಿ ಬರುತ್ತಿದೆ, ಇದನ್ನು ರೋಟರಿ ಸದಸ್ಯರು ಸಹಾಯ ಹಸ್ತದ ಮೂಲಕ ದೇಣಿಗೆಯಾಗಿ ಬರುತ್ತಿದೆ ಎಂದು ಸಹಾಯಕ ಗೌರ್ನರ್ ಶ್ರೀಧರ್ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಲಕ್ಷ್ಮೀ ನಾರಾಯಣ್ ಮಾತನಾಡುತ್ತಾ, ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ ಇಂದು ಮೂರನೇ ಬಾರಿಗೆ ದವಸಧಾನ್ಯದ ಕಿಟ್ ಗಳನ್ನು ವಿತ್ತರಣೆ ಮಾಡುತ್ತಿದ್ದೇವೆ, ಶ್ರೀರಾಮ್ ಪುರದ ಹಕ್ಕಿಪಿಕ್ಕಿ ಜನಾಂಗವರಿಗೆ, ಅನನ್ಯ ಶಾಲೆಯಲ್ಲಿ ಅನುದಾನ ರಹಿತ ಶಾಲೆಗಳ ಸಿಬ್ಬಂದಿಗೆ ಹಾಗೂ ಇಂದು ಸಹ ಧವಸದಾನ್ಯಗಳ ಕಿಟ್ ಕೊಡುಗೆಯಾಗಿ ನೀಡುತ್ತಿದ್ದೇವೆ, ನೊಂದ ಜೀವಗಳಿಗೆ ಸ್ವಂತಾನ ಹೇಳುವುದು ರೋಟರಿಯ ಮೂಲ ಉದ್ದೇಶ ಎಂದರು.

ಈ ಸಂದರ್ಭದಲ್ಲಿ  ಭಾರದ್ವಾಜ್, ವಿ.ಜಿ.ಲಕ್ಷ್ಮೀನಾರಾಯಣ್, ಎಸ್.ಎಸ್.ವಾಗೇಶ್, ವೆಂಕಟೇಶ್ ನಾಯ್ಕ್, ರಾಜಶೇಖರ್, ರೂಪ, ನಾಗರಾಜ್,ಸುರೇಶ್,ಮಲ್ಲಿಕಾರ್ಜುನ್,ಸುರೇಂದ್ರ, ಜಿ.ವಿಜಯಕುಮಾರ್,  ಮುಂತಾದವರಿದ್ದರು ಬಿ.ಎಸ್.ಆಶ್ವಥ್ ಸ್ವಾಗತಿಸಿದರು, ರೇಣುಕಾ ಆರಾದ್ಯ ನಿರೂಪಿಸಿದರು ರೇವಣಸಿದ್ದಪ್ಪ ಉಪಸ್ಥಿತರಿದ್ದರು. 
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ


ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153