ಶಿವಮೊಗ್ಗ: ನಗರದ ಭಜನಾ ಪರಿಷತ್, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಅರ್ಚಕವೃಂದ,
ಸಂಸ್ಕಾರ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಲೋಕ ಕಲ್ಯಾಣಕ್ಕಾಗಿ ರವೀಂದ್ರನಗರದ
ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನದಲ್ಲಿ ‘ಶ್ರೀ ರುದ್ರಹೋಮ’ವನ್ನು ಏ.೩೦ರಂದುಬೆಳಿಗ್ಗೆ ೧೧ಗಂಟೆಗೆ ನಡೆಸಲಾಗುವುದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಆ.ಪ.ರಾಮಭಟ್ಟರು ಹೇಳಿದರು.
ಅವರು ಇಂದು ದೇವಸ್ಥಾನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಶತಕೋಟಿ ಓಂ ನಮಃ ಶಿವಾಯ ಜಪ ಯಜ್ಞ ಅಂಗವಾಗಿ
ರುದ್ರಹೋಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹರಿಹರಪುರ ಶ್ರೀ ಕ್ಷೇತ್ರದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಈ
ಕಾರ್ಯಕ್ರಮ ನಡೆಯಲಿದೆ ಎಂದರು.
ಏ.೩೦ರ ಬೆಳಿಗ್ಗೆ ೮ಗಂಟೆಗೆ ಗಣಪತಿ ಪೂಜೆ, ಗೋ ಪೂಜೆ, ಹೋಮ ಮುಂತಾದ ಪೂಜಾ
ಕಾರ್ಯಕ್ರಮಗಳು ನಡೆಯುತ್ತವೆ. ೧೧ಗಂಟೆಗೆ ಶ್ರೀ ರುದ್ರಹೋಮ, ಮಹಾಪೂರ್ಣಾಹುತಿ ನಡೆಯಲಿದೆ. ೧೧.೩೦ಕ್ಕೆ ಕಾರ್ಕಳದ ವಾಗ್ಮಿ ಆದರ್ಶ ಗೋಕಲೆ ಯವರಿಂದ ಧಾರ್ಮಿಕ ಉಪನ್ಯಾಸ ವಿರುತ್ತದೆ ಎಂದರು.
ಭಜನಾ ಪರಿಷತ್‌ನ ಕಾರ್ಯದರ್ಶಿ ಶಬರೀಶ್ ಕಣ್ಣನ್ ಮಾತನಾಡಿ, ಸೃಷ್ಠಿಯಲ್ಲಿ ರುದ್ರದೇವನ ಪಾತ್ರ ಮಹತ್ವದಾಗಿದೆ. ರುದ್ರಹೋಮ ಮಾಡುವುದರಿಂದ ಪಶು, ಪಕ್ಷಿ, ಪ್ರಾಣಿ ಹಾದಿಯಾಗಿ ಸಕಲ ಮನುಕುಲಕ್ಕೂ ಅತಿ ಅಗತ್ಯ ಹಾಗೂ ಅವಶ್ಯಕವಾಗಿ ಒಳಿತು ಉಂಟಾಗುತ್ತದೆ. ಪ್ರಪಾಂಚಿಕ ಅಡ್ಡಿ ಆತಂಕಗಳು ಈಶ್ವರನ ಉಪಾಸನೆ ಮಾಡುವುದರಿಂದ ನಿವಾರಣೆಯಾಗುತ್ತವೆ. ಇಹಪರಗಳಲ್ಲಿ ಸುಖ ಪ್ರಾಪ್ತವಾಗುತ್ತದೆ ಎಂದರು.
ಈ ರುದ್ರಹೋಮ ಜಪಯಜ್ಞದಲ್ಲಿ ಶಿವಮೊಗ್ಗ ಹಾಗೂ ರಾಜ್ಯದ ಹಲವು ಜಿಲ್ಲೆಗಳಿಂದ ಭಗವದ್ಭಕರು
ನೂರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಶೀವಮೊಗ್ಗದ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪರಮೇಶ್ವರಪ್ಪ ಕೃಪೆಗೆ ಪಾತ್ರರಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಜನಾ ಪರಿಷತ್‌ನ ಉಪಾಧ್ಯಕ್ಷ ಎನ್.ಶ್ರೀಧರ್, ದೇವಸ್ಥಾನ ಸಮಿತಿಯ ಮುಖ್ಯಸ್ಥ ಉಮಾಪತಿ, ಸತೀಶ್ ಇದ್ದರು.