ಸಾಗರ ತಾಲೂಕು ಹೊಸೂರು ಗ್ರಾಮ ಪಂಚಾಯತಿಯ ನೆದರವಳ್ಳಿ ಗ್ರಾಮದ ವೀರೇಂದ್ರ ಗೌಡ್ರು ಹಾಗೂ ಚಿದಾನಂದ ಗೌಡರ ಕೊಟ್ಟಿಗೆ ಮನೆ ಗಾಳಿ ಮಳೆ ಇಂದ ಹಾನಿಗೊಳಗಾಗಿದ್ದು. ಸ್ಥಳಕ್ಕೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಾಗರ ನಗರಸಭೆಯ ವಿರೋಧ ಪಕ್ಷದ ನಾಯಕರಾದ ಗಣಪತಿ ಮಂಡಗಳಲೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಆನಂದ ಈಗಿನಬೈಲು, ನಾಗರತ್ನ ಹಾಗೂ ಚುನಾಯಿತ ಪ್ರತಿನಿಧಿಗಳು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತಿ ಇದ್ದರು.