ಶಿವಮೊಗ್ಗ: ಪ್ರಸ್ತುತ ಕಾಲದ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿದ್ದು, ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಬೇಗನೆ ಆರೋಗ್ಯ ಸಮಸ್ಯೆ ಕಾಣಿಸುತ್ತದೆ ಎಂದು ಆಯುರ್ವೇದ ಮಕ್ಕಳ ತಜ್ಞ ಡಾ. ಅಕ್ಷಯ್ ಗೌರವ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮಕ್ಕಳಲ್ಲಿ ಶೀತ, ಕೆಮ್ಮು, ಜ್ವರ ಲಕ್ಷಣಗಳು ವಾತಾವರಣ ಬದಲಾದಂತೆ ಬೇಗನೆ ಬರುವುದು ಸಹಜವಾಗಿರುತ್ತದೆ. ಇದಕ್ಕೆ ಪೋಷಕರು ಮನೆಯಲ್ಲೇ ಮಕ್ಕಳಿಗೆ ಪೌಷ್ಟಿಕಾಂಶದ ಅಂಶದ ಆಹಾರ, ನವಧಾನ್ಯಗಳು ಹೆಚ್ಚು ಕೊಡುತ್ತ ಬರುವುದು ಮಕ್ಕಳಿಗೆ ಒಳ್ಳೆಯದು ಎಂದು ತಿಳಿಸಿದರು.
ಮನೆಯಲ್ಲಿ ಪೋಷಕರ ವರ್ತನೆ ಮಕ್ಕಳ ಭವಿಷ್ಯದಲ್ಲಿ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಈಗಿನ ಮಕ್ಕಳು ಪೋಷಕರನ್ನು ಅನುಕರಿಸುತ್ತಾರೆ. ಆದ್ದರಿಂದ ಮಕ್ಕಳ ಎದುರು ಒಳ್ಳೆಯ ರೀತಿಯಲ್ಲಿ ಪ್ರೀತಿಯಿಂದ ನೋಡಿಕೊಳ್ಳುವುದು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಲ್ಲಿ ಹಿರಿಯರು ಮೊಮ್ಮಕ್ಕಳಿಗೆ ಪ್ರೀತಿಯಿಂದ ನೋಡಿಕೊಳ್ಳುವುದು ಸಾಮಾನ್ಯ. ಆದರೆ ಪ್ರೀತಿಯಿಂದ ಕೂಡಿಸುವ ತಿನಿಸು, ಚಾಕಲೇಟ್ ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.
ಹೊರ ತಿನಿಸುಗಳಿಗೆ ಅವಲಂಬಿತರಾಗದೆ ಮನೆಯಲ್ಲಿ ಪೋಷ್ಠಿಕಾಂಶ ನೀಡುತ್ತಾ ಬೆಳೆಸುವುದು ಅತಿ ಮುಖ್ಯ ಆಗಿರುತ್ತದೆ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗಲು ಸಹಕರಿಸುತ್ತದೆ. ಹುಟ್ಟಿದ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಚುಚ್ಚುಮದ್ದು ಹಾಗೂ ಚಿಕಿತ್ಸೆಗಳನ್ನು ಕೊಡಿಸುತ್ತ ಬರುವುದು ಅತಿ ಮುಖ್ಯ ಆಗಿರುತ್ತದೆ ಎಂದು ಹೇಳಿದರು.
ಈಗಿನ ಕಾಲದಲ್ಲಿ ಸೂಕ್ಷö್ಮ ವೈರಾಣು ಇಂದ ಬರುವಂತಹ ರೋಗಗಳು ಹಲವಾರು ಇರುವುದರಿಂದ ಮಕ್ಕಳಲ್ಲಿ ಅತಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುವುದು ಮುಖ್ಯವಾಗಿರುತ್ತದೆ. ಪೋಷಕರು ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಬೆಳೆಸಬೇಕು ಹಾಗೂ ಮಕ್ಕಳ ಎದುರು ಪೋಷಕರು ಯಾವುದೇ ದುರ್ವರ್ತನೆ ಮಾಡದೆ ಒಳ್ಳೆಯ ವರ್ತನೆಯಿಂದ ಮಕ್ಕಳ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಕಾಲಕ್ಕೆ ತಕ್ಕಂತೆ ಹಣ್ಣುಗಳು ಮತ್ತು ಮನೆಯ ಪೋಷಕಾಂಶದ ಆಹಾರವನ್ನೇ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಹೆಚ್ಚು ಜನ ಆಯುರ್ವೇದ ಪಾಲಿಸುತ್ತಿದ್ದಾರೆ ಎಲ್ಲ ರೋಗಗಳಿಗೂ ರೋಗದ ವಿಶೇಷತೆ ವೈದ್ಯಕೀಯ ವಿಭಾಗವು ಕೂಡ ಆಯುರ್ವೇದದಲ್ಲಿ ಲಭ್ಯವಿರುತ್ತದೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಆಯುರ್ವೇದ ಚಿಕಿತ್ಸೆಯು ಈಗ ಅತಿ ಹೆಚ್ಚು ಪ್ರಸಿದ್ಧವಾಗಿದ್ದು, ಇದು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಸಹಕಾರಿ ಆಗಿರುತ್ತದೆ. ಮಕ್ಕಳಿಗೆ ಸಂಬAಧಪಟ್ಟ ಯಾವುದೇ ರೋಗಗಳಿಗೂ ಆಯುರ್ವೇದ ಮಕ್ಕಳ ತಜ್ಞರಿಂದ ಶಿವಮೊಗ್ಗ ನಗರದಲ್ಲಿ ಚಿಕಿತ್ಸೆ ಸಿಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ಜಿ.ವಿಜಯ್ ಕುಮಾರ್, ವಸಂತ್ ಹೋಬಳಿದಾರ್, ಕುಮಾರಸ್ವಾಮಿ, ಸುಮತಿ, ಆದಿಮೂರ್ತಿ, ಅರುಣ್ ದೀಕ್ಷಿತ್, ಇನ್ನರ್‌ವ್ಹೀಲ್ ಕಾರ್ಯದರ್ಶಿ ಬಿಂದು ವಿಜಯಕುಮಾರ್ ಇದ್ದರು.