ಶಿವಮೊಗ್ಗ: ಶಿವಮೊಗ್ಗದ ಸರ್ಮತೋಮುಖ ಬೆಳವಣಿಗೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರೀಕ ಹಿತರಕ್ಷಣಾ ವೇದಿಕೆಯಿಂದ ಇತ್ತೀಚೆಗೆ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಮಾಯಣ್ಣಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ನಗರದ ಹಲವಾರು ಸಮಸ್ಯೆಗಳಲ್ಲಿ ಅವುಗಳಲ್ಲಿ ಕೆಲವನ್ನು ತಮ್ಮ ಗಮನಕ್ಕೆ ತರುವುದಾಗಿ ಹೇಳಿದ ಮನವಿದಾರರು, ಪಾಲಿಕೆಯ ಕಂದಾಯ ಇಲಾಖೆಯಲ್ಲಿ ತೆರಿಗೆದಾರರಿಗೆ ತೀವ್ರ ಸುಲಿಗೆ ಮತ್ತು ಅಸಮರ್ಪಕ ಸೇವೆ ಉಂಟಾಗುತ್ತಿದ್ದು, ಸರಿಪಡಿಸಬೇಕು. ಕಂದಾಯ ವಿಭಾಗದಲ್ಲಿ ಕಳೆದ ನಾಲ್ಕು ಐದು ವರ್ಷಗಳಿಂದ ಅಂತಹ ತಪ್ಪುಗಳ ಬಗ್ಗೆ ಸಮಗ್ರತನಿಖೆ ನಡೆಸಿ ಬಗ್ಗೆ ಸಮಗ್ರತನಿಖೆ ನಡೆಸಿ ಇದಕ್ಕೆ ಕಾರಣರಾಗಿರುವ ನೌಕರರು/ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ನಗರದಲ್ಲಿ ದಿನದಿಂದ ದಿನಕ್ಕೆ ಪಾರ್ಕಿಂಗ್ ಸಮಸ್ಯೆ ಉಲ್ಬಣವಾಗುತ್ತಿದೆ. ಇದನ್ನು ಪರಿಹರಿಸಲು ವಾಣಿಜ್ಯ ಕಟ್ಟಡಗಳು, ನರ್ಸಿಂಗ್ ಹೋಂಗಳುಪಾರ್ಕಿಂಗ್ಗೆ್ ಬಿಡಬೇಕಾದ ಜಾಗಗಳನ್ನು ಅನ್ಯ ಉದ್ದೇಶಗಳಿಗೆ ಬಳಸುತ್ತಿದ್ದಾರೆ. ಇದನ್ನು ಸರಿಪಡಿಸಲು ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್ ಮತ್ತು ರೋಡ್ ಮಾರ್ಜಿನ್ ಬಿಡದೆಹೊಸದಾಗಿ ಕಟ್ಟುತ್ತಿರುವ ಕಟ್ಟಡಗಳ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು ಎಂದರು.
ಬೀದಿಬದಿ ವ್ಯಾಪಾರಿಗಳ ಸಂಖ್ಯೆ ದಿನದಿಂದ ದಿನಕ್ಕೆ ನಗರದಲ್ಲಿ ನಗರದಲ್ಲಿ ವಿಪರೀತವಾU ಪರೀತವಾಗುತ್ತಿದೆ. ಈ ಬಗ್ಗೆ ಇರುವ ನಿಯಮಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ನಗರ ಸ್ಮಾರ್ಟ್ ಸಿಟಿ ಆದರೂ ಬೀದಿಬದಿ ವ್ಯಾಪಾರಿಗಳಿಂದ ‘ಸ್ಮಾರ್ಟ್ ಸಿಟಿ’ಗೆ ಅರ್ಥವೇ ಇಲ್ಲ ಎನ್ನುವ ರೀತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸಲು ಸಮಗ್ರ ನೀತಿಯೊಂದನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.ತೆರಿಗೆದಾರರ ಹಣದಲ್ಲಿ ನಿರ್ವಹಿಸುವ ಕಾಮಗಾರಿಗಳ ಗುಣಮಟ್ಟ ಉತ್ತಮ ಪಡಿಸುವ ಅಗತ್ಯ ತುಂಬಾ ಇದೆ. ಕಳಪೆ ಕಾಮಗಾರಿಗಳನ್ನು ನಿಯಂತ್ರಿಸಲು ಗುಣಮಟ್ಟದ ಕಾಮಗಾರಿ ಅತ್ಯಂತ ಅಗತ್ಯವಾಗಿದೆ. ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು. ನಗರದ ವಿವಿಧೆಡೆ ಸ್ಮಾರ್ಟ್ ಸಿಟಿಯಿಂದ ಶೌಚಾಲಯಗಳು ನಿರ್ಮಾಣವಾಗಿದ್ದರೂ ಅವುಗಳ ಉಪಯೋಗ ಆಗುತ್ತಿಲ್ಲ. ಅವುಗಳ ಬಳಕೆಯಾಗಬೇಕು ಎಂದು ಆಗ್ರಹಿಸಿದರು.
ಪಾಲಿಕೆಯ ವೆಬ್ಸೈಲಟ್ನಮಲ್ಲಿ ಪಾಲಿಕೆ ಆಡಳಿತದಲ್ಲಾಗುವ ಬದಲಾವಣೆಗಳು ತಕ್ಷಣ ಅಡವಳಿಕೆ ಆಗುತ್ತಿಲ್ಲ. ತೆರಿಗೆದಾರರು ವೆಬ್ಸೈಯಟ್ ಮೂಲಕ ದೂರು ನೀಡಲು ಈ ವೆಬ್ಸೈಲಟ್ನಿಲ್ಲಿಅವಕಾಶವೇ ಇಲ್ಲ. ಈ ವೆಬ್ಸೈಟಟ್ನೆಲ್ಲಿ ಹಿರಿಯ ಅಧಿಕಾರಿಗಳ ವಿ ಅವಕಾಶವೇ ಇಲ್ಲ. ಕೂಡಲೇ ಪಾಲಿಕೆಯ ವೆಬ್ಸೈೇಟ್ಗಲಳನ್ನು ತಕ್ಷಣ ಸಮರ್ಪಕವಾಗಿ ಬಳಕೆಗೆ ತರಬೇಕು. ಶಿವಮೊಗ್ಗ ಸ್ಮಾರ್ಟ್ ಸಿಟಿ ಆಗಿದ್ದರು ನಗರದ ಸ್ವಚ್ಛತೆ ಸಮರ್ಪಕವಾಗಿ ಬದಲಾವಣೆ ಆಗಿಲ್ಲ. ನಗರದಾದ್ಯಂತ ದಿನದಿಂದ ದಿನಕ್ಕೆ ಫ್ಲೆಕ್ಸ್ಗಳ ಹಾವಳಿ ತೀವ್ರವಾಗುತ್ತಿದೆ. ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. 24*7 ಸಂಪರ್ಕದ ನೀರಿನ ಶುಲ್ಕ ಅತ್ಯಂತ ದುಬಾರಿ ಆಗಿದೆ. ಇದನ್ನು ಸರಿಪಡಿಸಬೇಕು. ಮೂರು ತಿಂಗಳಿಗೊಮ್ಮೆ ನಾಗರೀಕರ ಸಮಸ್ಯೆ ಆಲಿಸಲು ಪಾಲಿಕೆ ಆವರಣದಲ್ಲಿ ಸಭೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣೆ ವೇದಿಕೆಯ ಡಾ. ಸತೀಶ್ ಕುಮಾರ್ ಶೆಟ್ಟಿ, ಕೆ.ವಿ. ವಸಂತ್ ಕುಮಾರ್, ಎಸ್.ಬಿ. ಅಶೋಕ್ ಕುಮಾರ್, ರವಿಕಿಶನ್ ಮತ್ತಿತರರಿದ್ದರು.