ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನ ಪಕ್ಕ, ಆರ್.ಟಿ.ಓ. ರಸ್ತೆ, ಸೈನಿಕ ಪಾರ್ಕ್ ನಲ್ಲಿ ಪರೋಪಕಾರಂ ತಂಡದಿಂದ ಸ್ವಚ್ಛತೆ ಮಾಡಲಾಯಿತು.

ಶಿವಮೊಗ್ಗ ನಗರದ ಹೆಮ್ಮೆಯ ಪ್ರೇಕ್ಷಣೀಯ ಸ್ಥಳವಾದ ಸೈನಿಕ ಪಾರ್ಕ್ ನಲ್ಲಿ, ಬಹಳಷ್ಟು ಜನ ಪಾರ್ಕ್ ನಲ್ಲಿ ಹಾಗೂ ಪಕ್ಕದ ರಸ್ತೆಗಳಲ್ಲಿ ಸುತ್ತ ಓಡಾಡಿದರೂ, ಇದು ನಮ್ಮ ಮನೆಯ ಹತ್ತಿರ ವಿರುವ ಉದ್ಯಾನವನ, ಇಲ್ಲಿ ವಿಶಾಲವಾಗಿ ಬಳೆದ ಗಿಡಗಳಿಂದ ಉಚಿತ ಸುತ್ತ ಮುತ್ತಲಿನ ನಾಗರಿಕರಿಗೆ ಆಮ್ಲಜನಕ (ಆಕ್ಸಿಜನ್) ದೊರೆಯುತ್ತಿದೆ.ನಮ್ಮ ಮಕ್ಕಳಿಗೆ ಬೇರೆ ಕಡೆ ಪಿಂಕ್ನಿಕ್ ಕರೆದು ಕೊಂಡು ಹೋದರೆ, ಆಟ ವಾಡುವುದಿರಲಿ, ಆಟದ ಸಾಮಾನುಗಳು ನೋಡಲು ಬೆಲೆ ತೆರಬೇಕು, ಇಲ್ಲಿ ಉಚಿತ ವಿವಿಧ ಆಟಗಳ ಸಾಮಗ್ರಿಗಳು ಇವೆ, ಇವುಗಳು ನಮ್ಮ ಸ್ವತ್ತು , ಅಕ್ಕಪಕ್ಕದ ನೆರೆಹೊರೆಯವರು ಸೇರಿ ಪಾರ್ಕ್ ಅನ್ನು ಸ್ವಚ್ಛತೆಯಿಂದ ಇಟ್ಟಿಕೊಳ್ಳಬೇಕು ಎಂದು ಅರಿವಿರಬೇಕು.

ಸಾರ್ವಜನಿಕರ ಪಾರ್ಕ್ ಗಳನ್ನು ಸ್ವಚ್ಛತೆ ಮಾಡಲು ಪೌರ ಕಾರ್ಮಿಕರೆ ಬರಬೇಕು, ನಾವೇನಾದರೂ ಒಂದು ಕಡ್ಡಿ ತೆಗೆದರೆ ನಮ ಘನತೆಗೆ ಚ್ಯುತಿ ಬರುವುದು, ಇಂತಹ ಪಾರ್ಕ್ ಗಳಲ್ಲಿ ಬೆಳ್ಳಗೆ ಹಾಗೂ ಸಂಜೆಯಾದರೆ ಹಿರಿಯ ನಾಗರಿಕರು ಮತ್ತು ಎಲ್ಲಾ ವಯೋಮಾನದ ಮನುಷ್ಯರು ವಾಯು ವಿಹಾರಕ್ಕೆ ಬರುವರು, ಒಬ್ಬೊಬ್ಬರೂ ಒಂದು ಹುಲ್ಲು ಕಡ್ಡಿ, ಹಾಗೂ ಒಬ್ಬರು ಒಂದು ಕಳೆಯ ಕಡ್ಡಿ ಕಿತ್ತರು ಸಾಕು, ಸದಾ ಉದ್ಯಾನವನ ಸ್ವಚ್ಛತೆಯ ಜೋತೆಗೆ ಸುಂದರ ಹೂವಿನ ನೋಟದೊಂದಿಗೆ ಸುಗಂಧದ ತಣ್ಣನೆಯ ಗಾಳಿ ಸರ್ವರಿಗೂ ನೀಡುತ್ತಾ ಕಣ್ಣಗೋಳಿಸುತ್ತದೆ.

ನಿಸ್ವಾರ್ಥ ಸೇವೆಯ ಪರೋಪಕಾರಂ ತಂಡವು, ಸ್ವಚ್ಛತೆಯ ಕೊರತೆ ಕಂಡು ಬಂದಂತಹ ಸ್ಥಳಗಳ ಆಯ್ಕೆ ಮಾಡಿ ಸ್ವಚ್ಛತೆ ಮಾಡುತ್ತದೆ, ಇಂದು ಬೆಳಗ್ಗೆ ಈ ಸ್ಥಳದಲ್ಲಿ ಸ್ವಚ್ವತೆಯ ಕಾರ್ಯ ಹಮ್ಮಿಕೊಂಡಾಗ ಪಾರ್ಕಿನಲ್ಲಿ ಸಾರ್ವಜನಿಕರಿಗೆ ನಿಷೇಧಾಜ್ಞೆಯಂತೆ ಕಾಣುತ್ತಿತ್ತು, ಹೊರಗೆ ವಿಹಾರಕ್ಕೆ ಹೋಗುತ್ತಿರುವ ಯುವಕರಿಗೆ ಕೈ ಬಿಸಿ ಕರೆದರೂ ಬಂದೆ ಒಂದೇ ನಿಮಿಷ ಎಂದು ಕೈ ಸನ್ನೆ ತೊರುತ್ತಿದ್ದರು, ತಂಡವು ತನ್ನ ಕಾರ್ಯವನ್ನು ಮುಗಿದ ಮೇಲೆ ಮಹಾನ್ ನಾಯಕರ ಚಿರಸ್ಮರಣೀಯರನ್ನು ಸ್ಮರಿಸಿ, ರಾಷ್ಟ್ರಗೀತೆ ಹಾಡಿ ಮುಕ್ತಾಯ ಗೋಳಿಸುತ್ತದೆ. ಸ್ವಚ್ಛತೆಯ ಕಾರ್ಯಕ್ಕೆ ಯಾರು ಬರಲಿಲ್ಲ, ಕೋನೆ ಪಕ್ಷ ರಾಷ್ಟ್ರಗೀತೆ ಹಾಡುವಾಗ ಅದರ ಧ್ವನಿಯನ್ನು ಕೇಳಿಯು ಸಹ ಯಾರು ವಾಯು ವಿಹಾರವನ್ನು, ನಿಲ್ಲಿಸಲಿಲ್ಲ, ಇದು ತಂಡದ ಸದಸ್ಯರಿಗೆ ಬೇಸರ ತಂದು, ಗೀತೆಯ ನಂತರ ಅವರ ಬಳಿ ಹೋಗಿ ಕೇಳೆ ಬಿಟ್ಟರು, ತಮಗೆ ಕಿವಿಗಳು ಕೇಳುವುದಿಲ್ಲವೆ, ಕೇಳುತ್ತೇವೆ, ಏನು ಓದಿರುವಿರಿ ಪದವಿಯ ಪಡೆದು ಉನ್ನತ ವೃತ್ತಿಯಲ್ಲಿ ಇರುವೆ ಎಂದರು, ನೀವೂ ಭಾರತದ ನೆಲದಲ್ಲಿ ಇರುವುದು ವ್ಯರ್ಥ ಎಂದು ತಂಡದ ಸದಸ್ಯರು ಅವರಿಗೆ ತಿಳಿ ಹೇಳಿದರು.

ವಾರದಲ್ಲಿ ಎರಡು ಬಾರಿ ಸಾರ್ವಜನಿಕ ಸ್ಥಳವನ್ನು ಆಯ್ಕೆ ಮಾಡಿ ಸ್ವಚ್ಛತೆ ಮಾಡುವ ತಂಡ ಸದಸ್ಯರು ಸಾಮಾನ್ಯ ಜನರಲ್ಲ, ನಾನಾ ಪದವಿ, ವೃತ್ತಿಯಲ್ಲಿ ಇದ್ದರೆ, ಇನ್ನೂ ಕೆಲವರು, ಬೃಹತ್ ಉದ್ಯಮಿಗಳು, ಬಹಳಷ್ಟು ಜನರು ಐಎಎಸ್, ಐಪಿಎಸ್, ಕೆಎಎಸ್, ಹಾಗೂ ಇತರೆ ಇಲಾಖೆಗಳ ಚೀಫ್ ಅಧಿಕಾರಿಗಳಾಗಿ ನಿವೃತಿ ಹೊಂದಿದವರು. ಒಟ್ಟಿನಲ್ಲಿ ಪರೋಪಕಾರಂ ತಂಡದ ಕೆಲಸ ಶ್ಲಾಘನೀಯ.

ವರದಿ ಮಂಜುನಾಥ್ ಶೆಟ್ಟಿ…